ಯಾದಗಿರಿ, ಸೆ. 21: ತಾಲೂಕಿನ ಹೆಡಗಿಮದ್ರ ಗ್ರಾಮದ ಗುಡ್ಡಗಾಡು ಪ್ರದೇಶದಿಂದ ಪಾಕಿಸ್ತಾನಕ್ಕೆ ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಕಳೆದ ಏಪ್ರಿಲ್ ತಿಂಗಳಲ್ಲಿ ಪಾಕಿಸ್ಥಾನಕ್ಕೆ ಕರೆ ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಕಲಬುರ್ಗಿಯಿಂದ ಐಎಸ್‌ಡಿ ತಂಡ ಬಂದು ತನಿಖೆ ನಡೆಸಿದೆ.
ಕರೆ ಹೋಗಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆ ಗ್ರಾಮಕ್ಕೆ ಭೇಟಿ ನೀಡಿದ ಐಎಸ್‌ಡಿ ಇನ್ಸ್ಪೇಕ್ಟರ್ ಮಹಾದೇವಪ್ಪ ಪಂಚಮುಖಿ ನೇತೃತ್ವದ ತಂಡ ಮಾಹಿತಿ ಕಲೆ ಹಾಕಿದೆ..
ಮಾಹಿತಿ ಕಲೆ ಹಾಕಿದ ತಂಡ ಎಡಿಜಿಪಿ ಅವರಿಗೆ ಮಾಹಿತಿ ನೀಡಿದೆ.