ಕಲಬುರಗಿ, ಸೆ. 21: ಕಿಡಿಗೇಡಿಗಳು ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ 24 ದನಗಳಿಗೆ ಗಂಭೀರ ಗಾಯಗಳಾಗಿವೆ.
ನಿನ್ನೆ ತಡರಾತ್ರಿ ಈ ಘಟನೆ ಚಿಂಚೋಳಿ ತಾಲೂಕಿನ ಕುಂಚಾವರA ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಅಮೃತಮ್ಮ ಬಿಚ್ಚಪ್ಪ ಎಂಬುವರಿಗೆ ಸೇರಿರುವ ದನದ ಕೊಟ್ಟಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಘಟನೆಯಲ್ಲಿ 20 ಹಸುಗಳು, 4 ಕರುಗಳು ಸೇರಿದಂತೆ ಒಟ್ಟು 24 ಜಾನುವಾರಗಳ ಸ್ಥಿತಿ ಗಂಭಿರವಾಗಿದೆ.
ಬೆoಕಿ ತನ್ನ ಕೆನ್ನಾಲಿಗೆಯಿಂದ ಸಂಪೂರ್ಣ ಗುಡಿಸಲು ಆವರಿಸಿದಾಗ ಕೊಟ್ಟಿಗೆ ಮಾಲೀಕ ಅಮೃತಪ್ಪ ಬಿಚ್ಚಪ್ಪ ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಿ, ದನಗಳನ್ನು ರಕ್ಷಿಸಿದ್ದಾರೆ.
ಈ ಘಟನೆ ಕುರಿತಂತೆ ಕುಂಚಾವರA ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.