ಕಲಬುರಗಿ, ಸೆ. 19: ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಲಿಂಗರಾಜ್ ಶಾಸ್ತಿç ಅವರು ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ.
ರವಿವಾರ 5 ಗಂಟೆ ಸುಮಾರಗೆ ಬಸವಕಲ್ಯಾಣ ತಾಲೂಕಿನ ಕಡೋಳ ಬಳಿ ರಸ್ತೆ ತಿರುವಿನಲ್ಲಿ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಕಾರ್‌ನ್ನು ಅವರ ಮಗ ಚಲಿಸುತ್ತಿದ್ದನೆಂದು ಹೇಳಲಾಗಿದ್ದು, ಜೊತೆಯಲ್ಲಿ ಅವರ ಮಡದಿಯೂ ಕೂಡ ಪ್ರಯಾಣ ಮಾಡುತ್ತಿದ್ದರು. ಮಕ್ಕಳು ಸೇರಿ ಮಡದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಘಾತವಾದ ಸ್ಥಳದಲ್ಲಿ ಜೇನುಗೂಡಿದ್ದು, ಅಫಘಾತದಿಂದ ಜೇನು ನೋಣಗಳು ಕಾರಿನ ಸುತ್ತ ಆವರಿಸಿಕೊಂಡು ಕಾರಿನಲ್ಲಿದ್ದವರಿಗೆ ಕಚ್ಚಿ ಸ್ವಲ್ಪ ಗಾಯಗೊಳಿಸಿವೆ ಎಂದು ಹೇಳಲಾಗಿದೆ.
ಅವರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು. ಅವರು ಇಬ್ಬರು ಗಂಡು ಮಕ್ಕಳು ಮತ್ತು ಮಡದಿಯನ್ನು ಬಿಟ್ಟು ಅಗಲಿದ್ದಾರೆ.
ಕಳೆದ 10 ವರ್ಷಗಳಿಂದ ಶರಣಬಸವ ವಿವಿಯಲ್ಲಿ ರಜಿಸ್ಟಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.