ಕಲಬುರಗಿ, ಸೆ. 06: ಕಲಬುರಗಿ ಮಹಾನಗರಪಾಲಿಕೆಯ ಜಿದ್ದಾಜಿದ್ದಿ ಹೋರಾಟದಲ್ಲಿ ಕಾಂಗೈ ಭದ್ರಕೋಟೆಯನ್ನು ಬಿಜೆಪಿ ಭೇಧಿಸುವ ಎಲ್ಲ ಲಕ್ಷಗಳು ಕಂಡುಬರುತ್ತಿದ್ದು ಈಗಾಗಲೇ ಘೋಷಣೆಯಾಗಿರುವ 38 ಸ್ಥಾನಗಳಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಾಲಿಕೆ ತನ್ನ ತಕ್ಕೆಗೆ ಹಾಕಿಕೊಳ್ಳಲು ಸರ್ವ ಪ್ರಯತ್ನ ನಡೆಸಿದೆ.
ಇನ್ನು ಪಾಲಿಕೆಯಲ್ಲಿ ಕಳೆದ 25 ವರ್ಷಗಳಿಂದ ಪಾರುಪತ್ಯ ಸಾಧಿಸಿದ ಕಾಂಗ್ರೆಸ್ ಈ ಬಾರಿ ಇಲ್ಲಿಯವರೆಗಿನ ಫಲಿತಾಂಶದ ಪ್ರಕಾರ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಜೆಡಿಎಸ್ ಪಕ್ಷವು ಕೂಡ ಮೂರು ಸ್ಥಾನಗಳಲ್ಲಿ ವಿಜಯಯಾಗಿದ್ದಾರೆ ಪಕ್ಷೇತರ ಅಭ್ಯರ್ಥಿ ಓರ್ವ ವಾರ್ಡಿನಲ್ಲಿ ಜಯಗಳಿಸಿದ್ದಾರೆ.