ಕಲಬುರಗಿ, ಸೆ. 06: ಮಹಾನಗರಪಾಲಿಕೆಗೆ ಚುನಾವಣೆಯು ಮುಗಿಯುತ್ತು, ಫಲಿತಾಂಶವು ಹೊರಬಂದಿತು, ಆದರೆ ಪಾಲಿಕೆ ಯಾವ ಪಕ್ಷದ ತೆಕ್ಕೆಗೆ ಹೋಗಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಒಟ್ಟು 55 ಸದಸ್ಯ ಬಲದ ಮಹಾನಗರಪಾಲಿಕೆಯಲ್ಲಿ ಅಧಿಕಾರಕ್ಕಾಗಿ 28 ಮ್ಯಾಜಿಕ್ ನಂಬರ್ ಬೇಕಾಗಿದ್ದು, ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದೆ.
27 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೆ, 23 ಸದಸ್ಯ ಬಲದ ಬಿಜೆಪಿ ಹಾಗೂ ಈ ಬಾರಿಯೂ ಕಿಂಗ್ ಮೇಕರ್ 04 ಸ್ಥಾನಗಳನ್ನು ಗಳಿಸಿದೆ. ಓರ್ವ ಪಕ್ಷೇತರ ಕೂಡ ಆಯ್ಕೆಯಾಗಿದ್ದಾರೆ.
ಅಲ್ಲದೇ ಸ್ಪಷ್ಟ ಬಹುಮತವಿಲ್ಲದೇ ಇರುವಾಗ ಯಾವ ಪಕ್ಷಕ್ಕೆ ಆಗಲಿ ಮೇಯರ್ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು ಕೂಡ ಮತದಾನ ಮಾಡಬಹುದಾಗಿದೆ.
ಬಿಜೆಪಿಯಿಂದ 2 ಶಾಸಕರು, ಓರ್ವ ಸಂಸತ್ ಸದಸ್ಯ, ಮೂರು ಜನ ವಿಧಾನ ಪರಿಷತ್ ಸದಸ್ಯರುಗಳಿದ್ದಾರೆ. ಸಂಖ್ಯಾ ಶಾಸ್ತçದ ಪ್ರಕಾರ ಬಿಜೆಪಿ 23+06+01=30 ಸದಸ್ಯ ಬಲ ಹೊಂದಲಿದೆ.
ಇನ್ನು ಕಾಂಗ್ರೆಸ್‌ನ ಓರ್ವ ಶಾಸಕಿ, ಓರ್ವ ರಾಜ್ಯಸಭಾ ಸದಸ್ಯರು ಸೇರಿದಂತೆ ಹೆಚ್ಚುವರಿಯಾಗಿ ಇಬ್ಬರು ಮತದಾನ ಮಾಡಬಹುದಾಗಿದೆ. ಕಾಂಗ್ರೆಸ್ 27+02=29 ಆಗುತ್ತದೆ.
ಇನ್ನು ಜೆಡಿಎಸ್ ಪಕ್ಷ 04 ಸದಸ್ಯ ಸ್ಥಾನ ಹೊಂದಿದ್ದು, ಅದು ಯಾವ ಪಕ್ಷದೊಂದಿಗೆ ಹೋಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ.
ಬಿಜೆಪಿಯ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಸಂಸತ್ ಸದಸ್ಯ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಜಿ. ಪಾಟೀಲ್, ಶಶೀಲ್ ಜಿ. ನಮೋಶಿ, ಸುನೀಲ್ ವಲ್ಯಾಪೂರೆ ಹಾಗೂ ಕಾಂಗ್ರೆಸ್‌ನಿAದ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಉತ್ತರ ಶಾಸಕಿ ಕನೀಜ್ ಫಾತಿಮಾ ಅವರುಗಳು ಮತದಾನದ ಹಕ್ಕು ಪಡೆದಿದ್ದಾರೆ.
ಈ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಆದ ಅವಾಂತರಗಳೆ ಬಿಜೆಪಿ ಹಿನ್ನಡೆಗೆ ಕಾರಣವಾಗಿದ್ದು, ಉದಾಹರಣಗೆ ವಾರ್ಡ ನಂ. 36ರಲ್ಲಿ ಬಿಜೆಪಿ ಆಕಾಂಕ್ಷಿಯಾಗಿದ್ದ ಅಭ್ಯರ್ಥಿಯೇ ಆ ವಾರ್ಡಿನಲ್ಲಿ ಪಕ್ಷೇತರ ಸದಸ್ಯನಾಗಿ ಆಯ್ಕೆಗೊಂಡಿದ್ದಾರೆ.
ಇನ್ನು ಇದಕ್ಕೆ ಹೊರತಾಗಿ ಕಾಂಗ್ರೆಸ್ ಪಕ್ಷವೂ ಕೂಡ ಬಿಜೆಪಿ ಮಾಡಿದ ತಪ್ಪನೇ ಅದು ಮಾಡಿದ್ದು, ವಾರ್ಡ ನಂ. 34ರಲ್ಲಿನ ಹಾಲಿ ಶಾಸಕ ಗಣೇಶ ವಳಕೇರಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅಲ್ಲಿ ಕಾಂಗ್ರೆಸ್ ಸೋಲನುಭವಿಸಬೇಕಾಯಿತು.
ಇಂತಹ ಎಷ್ಟೋ ಉದಾಹರಣೆಗಳಿದ್ದು, ಒಂದಿಷ್ಟು ಮಾತ್ರ ಇಲ್ಲಿ ನೀಡಲಾಗಿದೆ.
ತಮ್ಮ ತಮ್ಮ ಪ್ರತಿಷ್ಠೆಗಾಗಿ, ತಮ್ಮ ಹಿಂಬಾಲಕರಿಗೆ, ಅನುಯಾಯಿಗಳಿಗೆ ಟಿಕೆಟ್ ನೀಡುವ ಪದ್ಧತಿ ಬಿಟ್ಟು ನಿಜವಾಗಿ ಪಕ್ಷಕ್ಕಾಗಿ ಯಾರು ಕೆಲಸ ಮಾಡುತ್ತಿದ್ದಾರೆ, ಮಾಡಿದ್ದಾರೆ ಎಂಬುದು ಅರಿತು ಕಾರ್ಯಕರ್ತರಿಗೆ ಮಣೆ ಹಾಕಿದರೆ ಮಾತ್ರ ಪಕ್ಷಗಳಿಗೆ ಬಲ ಬರುತ್ತದೆ. ಪಕ್ಷ ಸಂಘಟನೆಯಾಗುತ್ತದೆ.