ಕಲಬುರಗಿ ಪಾಲಿಕೆ ಫೈಟ್-21 ಪಾಲಿಕೆಯಲ್ಲಿ ಪಾರುಪತ್ಯಕ್ಕೆ ಬಿಜೆಪಿ, ಕೈ ಪಕ್ಷದಿಂದ ತಂತ್ರಗಾರಿಕೆ ಕೈಗೆ ಮುಳುಗಾಲಿರುವ ಜೆಡಿಎಸ್ ಸೇರಿ ಮೂರು ಪಕ್ಷಗಳು

0
1204

ಕಲಬುರಗಿ, ಸೆ. 05: ಅಂತೂ ಇಂತೂ ಮಹಾಮಾರಿ ಕೋವಿಡ್‌ನ ಭೀತಿಯ ನಡುವೆಯೂ ಪಾಲಿಕೆಗೆ ಬಹುತೇಕ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಜಿದ್ದಾ ಜಿದ್ದಿನ ಕಣ. ಈ ಬಾರಿ ಮತಷ್ಟು ರಂಗೆರಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಾಲಿಕೆಯಲ್ಲಿ ಪಾರುಪತ್ಯ ಸಾಧಿಸಲು ಹಲವು ತಂತ್ರಗಳನ್ನು ರಚಿಸಿದೆ. ಇನ್ನು ಇನ್ನೊಂದು ಕಡೆ ಮತ್ತೆ ಮೇಯರ್ ಪಟ್ಟ ಪಡೆಯಲು ಕೈ ನಾಯಕರು ಸಹ ತಂತ್ರ ರೂಪಿಸಿದ್ದಾರೆ. ಆದ್ರೆ ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಎಐಎಂಐಎA ಹಾಗು ಆಪ್ ಹಾಗು ಎಸ್‌ಡಿಪಿಐ ಪಕ್ಷಗಳು ಕೈ ಅಭ್ಯರ್ಥಿಗಳ ಗೆಲುವಿಗೆ ಮುಳುವಾಗಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಲಬುರಗಿ ಮಹಾನಗರ ಪಾಲಿಕೆಗೆ 2013ರಲ್ಲಿ ನಡೆದ ನಂತರ 2018ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದ್ರೆ ವಾರ್ಡ ವಿಂಗಡನೆ ಹಾಗು ಕೊರೋನಾ ಕಾರಣ ಮೂರು ವರ್ಷಗಳು ತಡವಾಗಿ 2021ರಲ್ಲಿ ಇದೀಗ ನಡೆದಿದೆ. ಹೀಗಾಗಿ ಪಾಲಿಕೆ ಮೇಲೆ ತಮ್ಮ ಮೇಯರ್ ಪಟ್ಟದ ಅಭ್ಯರ್ಥಿಯನ್ನೆ ಗಾದಿಗೆ ಪಟ್ಟ ಏರಲು ಹವಣಿಸುತ್ತಿದ್ದಾರೆ. ಮಹಾನಗರ ಪಾಲಿಕೆ ವಾರ್ಡ ಹಾಗು ಪಕ್ಷಗಳ ಅಭ್ಯರ್ಥಿಗಳ ಹಣಾಹಣಿ ಚಿತ್ರಣ ನೋಡುವದಾದ್ರೆ..
ಕಾಂಗ್ರೆಸ್ 55 ಸ್ಥಾನದಲ್ಲಿ, ಬಿಜೆಪಿ 47 ಸ್ಥಾನದಲ್ಲಿ, ಜೆಡಿಎಸ್ -45 ಸ್ಥಾನದಲ್ಲಿ, ಎಐಎಂಐಎA-20 ಸ್ಥಾನದಲ್ಲಿ, ಆಮ್ ಆದ್ಮಿ ಪಕ್ಷ – 26 ಸ್ಥಾನದಲ್ಲಿ ಸ್ಪರ್ಧಿಸಿದ್ದರೆ, ಪಕ್ಷೇತರರು 83 ಜನ ಸೇರಿ ಒಟ್ಟು ಕಣದಲ್ಲಿ 55 ಸ್ಥಾನಗಳಿಗಾಗಿ 276 ಜನ ಉಳಿದಿದ್ದಾರೆ.
ಇನ್ನು ಕಲಬುರಗಿ ಮಹಾನಗ ಪಾಲಿಕೆ ಕಿಂಗ್ ಮೇಕರ್ ಕೈ ನಾಯಕ ಖಮರುಲ್ ಇಸ್ಲಾಂ ಹಾಗು ಮಾಜಿ ಸಿಎಂ ಧರ್ಮಸಿಂಗ್ ಇಲ್ಲದೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತಿದೆ. ಹೀಗಿರುವಾಗಲೇ ಗಾಯದ ಮೇಲೆ ಬರೇ ಎಂಬAತೆ ಕೈ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿ ಜೆಡಿಎಸ್ ಪಕ್ಷ ಅವರದೇ ಪಕ್ಷದ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್ ನೇತೃತ್ವದಲ್ಲಿ ಕಣಕ್ಕಿಳಿಸಿದ್ರೆ, ಇತ್ತ ಕಳೆದ ಬಾರಿ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಇಲಿಯಾಸ್ ಸೇಟ್ ಬಾಗವಾನ್ ಕೆಲ ತಿಂಗಳ ಹಿಂದೆ ಎಐಎಂಐಎA ಪಕ್ಷ ಸೇರಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಲು ಸಜ್ಜಾಗಿದ್ದಾರೆ.
ಇನ್ನೊಂದು ಕಡೆ ಯಾವುದೇ ರಾಜಕೀಯ ಪ್ರಭಾವಿ ಮುಖಂಡರನ್ನು ಹೊಂದಿಲ್ಲ ಅಂದ್ರು ಸಹ ಆಪ್ ಪಕ್ಷ ಇದೇ ಮೊದಲ ಬಾರಿಗೆ ಪಾಲಿಕೆ ಫೈಟ್‌ಗೆ ಧಮಕ್ಕಿದ್ದು ಬಹುತೇಕ ಕಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದಾರೆ. ಈ ಮೂರು ಪಕ್ಷಗಳು ಬಹುತೇಕ ಕಡೆ ಮುಸ್ಲಿಂ ಸಮುದಾಯ ಹೆಚ್ಚಿರುವ ಕಡೆ ಅದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಇದು ಕಾಂಗ್ರೆಸ್‌ನ ಕೆಲ ಅಭ್ಯರ್ಥಿಗಳ ಹಿನ್ನಡೆ ಆಗುವದರಲ್ಲಿ ಎರಡು ಮಾತಿಲ್ಲ. ಇನ್ನು ರಾಜಕೀಯ ವಿಶ್ಲೇಷಕರ ಪ್ರಕಾರ ಈ ಮೂರು ಪಕ್ಷಗಳು ಕೈಗೆ ಮುಳುವಾದ್ರೆ, ಸೆಪ್ಟೆಂಬರ್ 03ರಂದು ಶ್ರಾವಣ ಮಾಸದ ಕೊನೆ ಶುಕ್ರವಾರ ಆದ ಕಾರಣ ಲಕ್ಷ್ಮೀ ಪೂಜೆ ಹಿನ್ನಲೆ ಬಹುತೇಕ ಕಡೆ ಮತದಾನ ಕಡಿಮೆ ಆಗಿರುವದು ಬಿಜೆಪಿ ಅಭ್ಯರ್ಥಿಗಳ ಕಂಟಕಕ್ಕೆ ಕಾರಣವಾಗಿದೆ.
ಸದ್ಯ ಪಾಲಿಕೆ ಮೇಯರ್ ಸ್ಥಾನದ ಚುಕ್ಕಾಣಿ ಹಿಡಿಯಲು 28 ಸ್ಥಾನಗಳು ಅವಶ್ಯಕವಿದೆ. ಇದರ ಜೊತೆಗೆ ಬಿಜೆಪಿಯ ಒರ್ವ ಸಂಸದ ಉಮೇಶ ಜಾಧವ್,ಇಬ್ಬರು ಶಾಸಕರುಗಳಾದ ದತ್ತಾತ್ರೇಯ ಪಾಟೀಲ್ ಹಾಗು ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಹಾಗು ಎಂಎಲ್‌ಸಿಗಳಾದ ಬಿ.ಜಿ.ಪಾಟೀಲ್, ಶಶಿಲ್ ನಮೋಶಿ ಹಾಗು ಸುನೀಲ್ ವಲ್ಯಾಪುರೆ ಮತ ಚಲಾಯಿಸುವ ಹಕ್ಕಿದೆ.
ಈ ಮೂಲಕ ಇಲ್ಲಿ ಬಿಜೆಪಿ ಮ್ಯಾಜಿಕ ನಂಬರ್ ತಲುಪಿ ಮೇಯರ್ ಸ್ಥಾನದತ ನೋಡುತ್ತಿದ್ರೆ, ಇತ್ತ ಕಾಂಗ್ರೆಸ್ ನಲ್ಲಿ ಸಹ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗು ಕಲಬುರಗಿ ಉತ್ತರ ಶಾಸಕಿ ಖನಿಜ್ ಫಾತಿಮಾ ಇಬ್ಬರು ಮತದಾನದ ಹಕ್ಕು ಹೊಂದಿದ್ದಾರೆ. ಆದರೆ ಲೋಕಸಭಾ ಚುನಾವಣೆ ಬಳಿಕ ಕಳೆದ ಎರಡುವರೆ ವರ್ಷದಿಂದ ಖರ್ಗೆಯವರು ಜಿಲ್ಲೆಯತ್ತ ಮುಖಮಾಡಿಲ್ಲ, ಹೀಗಾಗಿ ಮೇಯರ್ ಚುನಾವಣೆ ಮತದಾನಕ್ಕು ಬರುವದು ಬಹುತೇಕ ಡೌಟ್ ಆಗಿದೆ.
ಸದ್ಯ ಮೇಯರ್ ಪಟ್ಟ ಯಾರಿಗೆ ಎಂಬುದು ತೀವ್ರ ಕೂತುಹಲ ಸೃಷ್ಟಿಸಿದೆ. ಹೀಗಾಗಿ ಇದೆಲದಕ್ಕು ಇಂದು ಮಧ್ಯಾಹ್ನದವರೆಗೆ ಒಂದಿಷ್ಟು ಸ್ಪಷ್ಟ ಚಿತ್ರಣ ಸಿಗಲಿದೆ.

LEAVE A REPLY

Please enter your comment!
Please enter your name here