ಕಲಬುರಗಿ, ಸೆ. 05: ಕಳೆದ ಮೂರು ದಿನಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಹಲವಡೆ ಭಾರೀ ಅವಾಂತರ ಸೃಷ್ಟಿಯಾಗಿದ್ದು ಇದರಿಂದಾಗಿ ಗ್ರಾಮಸ್ಥರಿಗೆ ಪ್ರವಾಹ ಭೀತಿ ಮತ್ತೆ ಶುರುವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ತಡರಾತ್ರಿ ಅಬ್ಬರಿಸಿದ ವರುಣನ ಆರ್ಭಟಕ್ಕೆ ತುಂಬಿರುವ ಬೆಣ್ಣೆತೋರಾ ಜಲಾಶಯ ತುಂಬಿಹೋಗಿದೆ.ಹಳೆ ಹೆಬ್ಬಾಳ ಬಳಿಯ ಸಣ್ಣ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.
ಬೆಣ್ಣೆತೋರಾ ಡ್ಯಾಂ ನಿಂದ ಸುಮಾರು 20 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಬಿಡುಗಡೆ ಮಾಡಲಾಗಿದೆ. ಡ್ಯಾಂ ಕೆಳಭಾಗದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ತಲುಪಿದ್ದರಿಂದ ಗ್ರಾಮದಲ್ಲಿನ ಹೋಟೆಲ್, ನಾಲ್ಕೈದು ಮನೆಗಳಿಗೂ ನುಗ್ಗಿದ ನೀರು ನುಗ್ಗಿದೆ.
ಚಿಂಚೋಳಿ ತಾಲೂಕಿನ ಹಲವಡೆ ಮಳೆಯಿಂದಾಗಿ ಭಾರೀ ಅವಾಂತರ ಸಂಭವಿಸದ್ದು, ದೇಗಲಮಡ್ಡಿ ಗ್ರಾಮದೊಳಗೆ ನುಗಿದ್ದ ನಾಲಾ ನೀರಿನಿಂದಾಗಿ ಸುಮಾರು 50ಕ್ಕೂ ಹೆಚ್ಚು ಮನೆಗಳು ಹಾಳಾಗಿವೆ.
ಈ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರೋ ರಾತ್ರಿ ಮನೆಯಲ್ಲಿನ ಸಾಮಾನುಗಳನ್ನು ಸ್ಥಳಾಂತರಿಸಲು ಹರಸಾಹಸ ಪಡಬೇಕಾಯಿತು.
ಅಲ್ಲದೇ ತಾಲೂಕಿನ ಪಟಪಳ್ಳಿ, ಹಸರಗುಂಡಗಿ , ಗಡಿಕೇಶ್ವರ , ಯಂಪಳ್ಳಿ , ಕಂಚಿನಾಳ , ಶಾದಿಪೂರ್ ಗ್ರಾಮಗಳಿಗೂ ನುಗ್ಗಿದ ನೀರು ನುಗ್ಗಿ ಹಾನಿಯುಂಟಾಗಿದೆ.
ಹಳೆ ಹೆಬ್ಬಾಳ ಗ್ರಾಮದ ಅನೇಕ ಮನೆಗಳು ಜಲಾವೃತ
ಕಾಳಗಿ ತಾಲೂಕಿನ ಹಳೆ ಹೆಬ್ಬಾಳ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತಗೊಂಡಿದ್ದು, ನೀರಿನಿಂದಾಗಿ ಮನೆಗಳಲ್ಲಿನ ಸಾಮಾನುಗಳು ಹಾನಿಯಾಗಿವೆ.
ಹಳೆ ಹೆಬ್ಬಾಳ ಗ್ರಾಮಕ್ಕೆ ಬೆಣ್ಣೆ ತೋರಾ ಡ್ಯಾಮ್ ನಿಂದ ನೀರು ಬಿಟ್ಟಿದ್ದರಿಂದ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳಿಂದಾಗಿ ಅನೇಕ ಗ್ರಾಮಗಳಿಗೆ ಹಳ್ಳದ ನೀರು ನುಗ್ಗಿದೆ.
ಕಲಬುರಗಿ ಜಿಲ್ಲೆಯಲ್ಲಿ ತಡರಾತ್ರಿ ಅಬ್ಬರಿಸಿದ ವರುಣನ ಆರ್ಭಟಕ್ಕೆ ತುಂಬಿರುವ ಬೆಣ್ಣೆತೋರಾ ಜಲಾಶಯ ತುಂಬಿಹೋಗಿದೆ.
ರೈತರ ಜಮೀನಿನಲ್ಲಿ ಶೇಖರಣೆ ಆದ ಮಳೆ ನೀರಿನಿಂದಾಗಿ ಕಟಾವಿಗೆ ಬಂದಿದ್ದ ಉದ್ದು, ಹೆಸರು, ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.
ಸೇಡಂ ತಾಲೂಕಿನ ಸಂಗಾವಿ ಗ್ರಾಮಕ್ಕೂ ನುಗ್ಗಿದ ನೀರಿನಿಂದಾಗಿ ಸಂಗಾವಿ ಗ್ರಾಮದ ಸಂಗಮೇಶ್ವರ ದೇವಾಲಯ ಜಲಾವೃತಗೊಂಡಿದೆ.
ಸಂಗಮೇಶ್ವರ ದೇಗುಲಕ್ಕೆ ನೀರು ಸುತ್ತುವರೆದಿದೆ.
ಅಲ್ಲದೇ ಕಾಳಗಿಯಲ್ಲಿ ಧಾರಾಕಾರ ಮಳೆಗೆ ನೀಲಕಂಠೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ನೀಲಕಂಠೇಶ್ವರ ದೇವಸ್ಥಾನ.
ಅಲ್ಲದೇ ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿ ಬೆಳೆನಾಶವಾಗಿದ್ದು, ಮಳೆಯ ಆರ್ಭಟಕ್ಕೆ ಹಲವಡೆ ರಸ್ತೆಗಳು ಕಿತ್ತುಹೋಗಿವೆ.