ಕೃಷಿಕರ ಮಗಳಾಗಿದ್ದರಿಂದ ನನಗೆ ಕೃಷಿ ಖಾತೆ ಸಿಕ್ಕಿದೆ:ಶೋಭಾ ಕದಂದ್ಲಾಜೆ

0
680
shobha karandlaje: Latest News, Videos and shobha karandlaje Photos | Times  of India

ಕಲಬುರಗಿ, ಸೆ. 04: ನಾನು ಕೃಷ್ಣ ತಜ್ಷಳಲ್ಲಾ, ಆದರೆ ನಾನೊಬ್ಬಳ್ಳು ಕೃಷಿಕರ ಮಗಳಾಗಿದ್ದು, ನನಗೆ ಕೃಷಿ ಮಂತ್ರಿ ಆಗೋ ಅವಕಾಶ ಸಿಕ್ಕಿದೆ, ಈ ಖಾತೆ ಬಹಳ ಕಷ್ಟಕರವಾದ ಖಾತೆ ಆದರೂ ಕೃಷಿ ತಜ್ಷರ ಮಾಹಿತಿ ಆಧರಿಸಿ ಉತ್ತಮ ಕೆಲಸ ಮಾಡುತ್ತೇನೆ ಎಂದು ನೂತನ ಕೃಷಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿ ಅವರು ರೈತರು ಎಷ್ಟೇ ಕೃಷಿ ಮಾಡಿದ್ದರೂ ನೆಮ್ಮದಿಸಿಲ್ಲ, ರೈತರು ಹಲವಾರು ವರ್ಷಗಳಿಂದ ಕಷ್ಟದಲ್ಲಿದ್ದಾರೆ, ಅವರ ಕಷ್ಟಗಳ ನಿವಾರಣೆಗಾಗಿ ನಾನು ಬದ್ಧನಾಗಿದ್ದು, ಕೃಷಿ ಲಾಭದಾಯಕ ಅಲ್ಲ ಎನಿಸಿದೆ, ಹೀಗಾಗಿ ಕೃಷಿಕರ ಮಕ್ಕಳು ಕೆಲಸಕ್ಕಾಗಿ ವಲಸೆ ಹೋಗ್ತಿದ್ದಾರೆ ಎಂದು ಅವರು ಕೃಷಕ, ಕೃಷಿಯಲ್ಲಿರುವ ಹಾಗೆ ಮಾಡೋದು ಸವಾಲಿನ ಕೆಲವಾಗಿದೆ, ಕೇಂದ್ರ ಸರಕಾರದ ಕೃಷಿ ಸವಲತ್ತುಗಳಣ್ನು ಪಡೆದುಕೊಳ್ಳಬೇಕೆ ಎಂದು ರೈತರಿಗೆ ಕರೆ ನೀಡಿದ್ದಾರೆ.
ಕೇಂದ್ರದಲ್ಲಿನ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿಗಾಗಿ 2021ರಲ್ಲಿ ಕೇಂದ್ರ ಬಜೆಟ್‌ನಲ್ಲಿ ಕೃಷಿಗಾಗಿ 123000 ಕೋಟಿ ರೂ. ನೀಡಿದೆ, ಇದರಿಂದಾಗಿ ಇಂದು ಸಮಾಜ ಮತ್ತೆ ಕೃಷಿ ಕಡೆ ಮುಖ ಮಾಡ್ತಾದ್ದಾರೆ ಎಂದರು.
2014ರ ಚುನಾವಣೆಯಲ್ಲಿ ಯುಪಿಎ ಸರಕಾರದ ಬಜೆಟ್‌ನಲ್ಲಿ 23 ಸಾವಿರ ಕೋಟಿ ಮಾತ್ರ ಕೃಷಿಗಾಗಿ ಮೀಸಲಾಡಲಾಗಿತ್ತು, ಆದರೆ ಮೋದಿಜಿಯವರ ನೇತೃತ್ವದ ಸರಕಾರ ಸಾವಿರದಿಂದ ಲಕ್ಷಕ್ಕೆ ಏರಿಸಿದೆ ಎಂದು ವಿವರಿಸಿದರು.
ನಮ್ಮ ದೇಶದ ಕೃಷಿಯನ್ನು ವೈಜ್ಞಾನಿಕ ಜೊತೆಗೆ ಕೃಷಿ ರೈತರಿಗೆ ಲಾಭದಾಐಕ ಗೊಳಿಸೋದು ನಮಗೆ ಸಲಾಲಿನ ಕೆಲಸವಾಗಿದೆ, ಕೃಷಿ ಉತ್ಪನ್ನ ರಫ್ತು ಮಾಡುವಲ್ಲಿ ನಾವು ವಿಶ್ವದಲ್ಲಿ 9ನೇ ಸ್ಥಾನಕ್ಕೆ ಬಂದಿದ್ದೇವೆ, ಶೇ. 70ರಷ್ಟು ಎಣ್ಣೆ ಕಾಳುಗಳನ್ನು ನಾವು ಬೇರೆ ದೇಶಗಳಿಂದ ಆಮದುಮಾಡಿಕೊಳ್ಳುತ್ತಿದ್ದೇವೆ, ಆದರೆ ಎಣ್ಣ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿ ಆಗಬೇಕು ಅಂದಾಗಿ ಮಾತ್ರ ಆಮದು ಪ್ರಮಾಣ ಕಡಿಮೆಯಾಗುತ್ತದೆ, ಅದಕ್ಕಾಗಿ ಎಣ್ಣೆ ಕಾಳು ಬಿತ್ತನೆ ಬೀಜಗಳನ್ನ ನಮ್ಮ ಸರಕಾರ ರೈತರಿಗೆ ಉಚಿತವಾಗಿ ನೀಡುತ್ತಿದೆ ಎಂದರು.
ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು 20.22 ಪರ್ಸೆಂಟ್ ಆಗಿದ್ದು, ಸಣ್ಣ ರೈತರನ್ನು ಒಟ್ಟುಗೂಡಿಸಿ ಸಂಘಗಳನ್ನು ಮಾಡುವ ಕೆಲಸ ಮಾಡಬೇಕಾಗುತ್ತದೆ ಎಂದ ಅವರು ಸಣ್ಣ ರೈತರಿಗೆ ಕೃಷಿ ಸಾಧನಗಳನ್ನು ಬಾಡಿಗೆಗೆ ಕೋಡುವ ಕೆಲಸ ಮಾಡಬೇಕಿದೆ, ಕೃಷಿ ಉತ್ಪನ್ನ ಉತ್ಪಾದನೆ, ಪ್ರೋಸೆಷಸ್, ಮಾರ್ಕೆಟಿಂಗ್ ಗೆ ಕೇಂದ್ರ ಸರ್ಕಾರ ಒತ್ತು ಕೊಡುತ್ತಿದೆ ಎಂದು ಹೇಳಿದರು.
ಇಥೇನಾಲ್ ಬೇಸ್ ಸಕ್ಕರೆ ಕಾರ್ಖಾನೆ ಆಗಬೇಕು, ಸಕ್ಕರೆ ಕಾರ್ಖಾನೆಗಳಿಗೆ ಈಗಾಗಲೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ.

ತೊಗರಿ ಕಾಳಿಗೆ 6300, ಹೆಸರು ಕಾಳಿಗೆ 7200 ರೂ. ಎಂಎಸ್ ಪಿ ನಿಗದಿ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ನನಗೆ ಕೃಷಿ ಸಚಿವೆಯಾಗಿ ಕೆಲಸ ಮಾಡಲು ನಮ್ಮ ನಾಯಕರು ಅವಕಾಶ ಕೊಟ್ಟಿದ್ದಾರೆ, ಅತ್ಯಂತ ಪ್ರಮಾಣಿಕ, ಪಾರದರ್ಶಕವಾಗಿ ಕೆಲಸ ಮಾಡುತ್ತೇನೆ ಎಂದರು.
ರೈತರ ಆತ್ಮಹತ್ಯೆಗಳು ಕಡಿಮೆ ಆಗಬೇಕಾದ್ರೆ, ರೈತರು ಮಿಶ್ರ ಬೆಳೆಗಳನ್ನು ಬೆಳೆಯಬೇಕು ಅಂದರೆ ಅವರ ಆದಾಯ ಹೆಚ್ಚಾಗಬೇಕು ಎಂದ ಕರಂದ್ಲಾಜೆ ಅವರು ಬೆಂಗಳೂರಿನಲ್ಲಿ ಇದೇ ತಿಂಗಳು 22ರಂದು ಕೃಷಿ ತಜ್ಞರ ಸಭೆ ಕರೆದಿದ್ದೆನೆ ಎಂದರು.

LEAVE A REPLY

Please enter your comment!
Please enter your name here