ಕಲಬುರಗಿ, ಸೆ. 03: ಮಹಾನಗರಪಾಲಿಕೆಗೆ ನಡೆಯುತ್ತಿರುವ ಸದಸ್ಯರುಗಳ ಚುನಾವಣೆಯಲ್ಲಿ ಇಂದು ಬೆಳ್ಳಿಗೆ 10ಗಂಟೆಯವರೆಗಿನ ವರದಿಗಳ ಪ್ರಕಾರ ಶೇ. 10ರಷ್ಟು ಮತದಾನವಾಗಿದೆ.
ಶ್ರಾವಣ ಶುಕ್ರವಾರ ಆಗಿದ್ದರಿಂದ ಇಂದು ಬಹುತೇಕ ಮಹಿಳೆಯರು ಮತದಾನಕ್ಕೆ ಬೆಳಿಗ್ಗೆ ಆಗಮಿಸದಿರುವುದು ಎಲ್ಲಡೆ ಮತದಾನ ಕೇಂದ್ರಗಳಲ್ಲಿ ಕಂಡುಬAದಿತು.
ಮತದಾನ ತುಂಬಾ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.
ಪಾಲಿಕೆಯ 55 ವಾರ್ಡಗಳಿಗೆ ಇಂದು ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಫಲಿತಾಂಶ ಸೆಪ್ಟಂಬರ್ 6ರಂದು ಹೊರಬಿಳಲಿದೆ.