ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಭೀತಿ ಹತಾಶೆಯಿಂದ ಕಾಂಗೈ ಕಾರ್ಯಕರ್ತರ ಮೇಲೆ ದೌರ್ಜನ್ಯ

0
790

ಕಲಬುರಗಿ, ಸೆ. 02: ಪಾಲಿಕೆಯಲ್ಲಿ ಸೋಲಿನಿ ಭೀತಿಯಿಂದ ಹತಾಶೆಗೊಂಡು ಭಾರತೀಯ ಜನತಾ ಪಕ್ಷ ಪೋಲಿಸರನ್ನು ತನ್ನ ಕೈಗೊಂಬೆಯನ್ನಾಗಿಸಿಕೊAಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಇಲ್ಲದ ಆರೋಪ ಹೋರಿಸಿ ಅವರ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಇಂದಿಲ್ಲಿ ಹೇಳಿದ್ದಾರೆ.
ಅವರು ಗಾಂಧಿ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಜಿಲ್ಲೆಯಲ್ಲಿ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಬಿಜೆಪಿ ಸರಕಾರದ ದುರಾಡಳಿತದಿಂದ ಜನತೆ ಬೇಸತ್ತು ಹೋಗಿದೆ ಅಲ್ಲದೇ ರಾಜ್ಯದಲ್ಲಿ ಬಿಜೆಪಿÀಯವರು ಈ ಹಿಂದೆ 9 ವರ್ಷಗಳ ಕಾಲ ಅಧಿಕಾರ ನಡೆಸಿದ್ದು, ಈ ಸಮಯದಲ್ಲಿ ಕಲಬುರಗಿಯಲ್ಲಿ ಯಾವುದೇ ಅಭಿವೃದ್ಧಿಪರ ಕೆಲಸಗಳನ್ನು ಮಾಡಿಲ್ಲ ಎಂದರು.
ನಿನ್ನೆ ರಾತ್ರಿ ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಅವರ ಅಳಿಯನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಅವರು ಇದು ಬಿಜೆಪಿಯವರ ಹತಾಶೆಗೆ ಹಿಡಿದ ಕನ್ನಡಿಯಾಗಿದೆ, ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರ ಬಾರದು, ಅವರನ್ನು ಹೇಗಾದರೂ ಮಾಡಿ ತಡೆಯಬೇಕು ಎಂಬ ಉದ್ದೇಶದಿಂದ ಇಂತಹ ಹೇಯ ಕೆಲಸ ಮಾಡುತ್ತಿದ್ದುಲ್ಲದೇ ವಾರ್ಡ ನಂ. 12ರ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿದ್ದ ನಾಲ್ವರ ಮೇಲೆ ಐಪಿಸಿ ಕಲಂ 107ರ ಪ್ರಕರಣ ದಾಖಲು ಮಾಡಿದ್ದಾರೆ ಎಂದರು.
ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ, ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾರು ಯಾರು ಏನು ಮಾಡಿದ್ದಾರೆಂಬುದು ಪಟ್ಟಿ ಮಾಡಿ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಸರಕಾರದ ಅವಧಿಯಲ್ಲಿ ಅದರಲ್ಲೂ ಮಲ್ಲಿಕಾರ್ಜುನ ಖರ್ಗೆಯವರು ಇಎಸ್‌ಐ ಆಸ್ಪತ್ರೆ, ಜಯದೇವ ಆಸ್ಪತ್ರೆ ಟ್ರೋಮಾಕೇರ್, ಜೀಮ್ಸ್ ಇಂತಹ ಅನೇಕ ಆಸ್ಪತ್ರೆಗಳನ್ನು ತಂದು ಕೋವಿಡ ಸಮಯದಲ್ಲಿ ಜನರ ಪ್ರಾಣ ಉಳಿಸಿದ್ದಾರೆ ಎಂದು ವಿವರಿಸಿದರು.
ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಕ್ಕೆ ಒಂದು ಉದಾಹರಣೆ ಕೊಡಲಿ, ಅದು ಅವರಿಗೆ ಸಿಗುವುದಿಲ್ಲ, ಕಾರಣ ಏನರೇ ಮಾಡಿದರೆ ಮಾತ್ರ ಸ್ಯಾಂಪಲ್ ಇರುತ್ತವೆ ಎಂದು ಜರಿದರು.
ಕಳೆದ ವರ್ಷ ಮಾರ್ಚ ತಿಂಗಳಿAದ ಜುಲೈ ಅಂತ್ಯದ ವರೆಗೆ ಕೊರೊನಾ ಮಹಾಮಾರಿಯಿಂದ ಜನತೆ ತಲ್ಲಣಿಸಿಹೋಗಿತ್ತು, ಕೋವಿಡ್‌ಗೆ ಜೀವರಕ್ಷಕ ಎಂಬAತೆ ಮೂರಾನಾಲ್ಕು ಸಾವಿರ ಬೆಲೆಯ ರೆಮ್ಡಿಸಿವೆರ್ 20 ರಿಂದ 30 ಸಾವಿರ ವರೆಗೆ ಕಳ್ಳಸಂತೆಯಲ್ಲಿ ಮಾರಾಟವಾಯಿತು, ಇಷ್ಟು ದೊಡ್ಡ ಮೊತ್ತದ ಔಷಧಿಗಳು ಖರೀದಿಸುವುದು ಜನ ಸಾಮಾನ್ಯರ ಅದರಲ್ಲೂ ಬಡವರಿಗೆ ಹೇಗೆ ಸಾಧ್ಯ ಎಂದು ಪ್ರಶ್ನಸಿದ ಅವರು ಇಂತಹ ಸಮಯದಲ್ಲಿ ಅಂತಹವರ ನೆರವಿಗೆ ಕಾಂಗ್ರೆಸ್ ಪಕ್ಷ ಧಾವಿಸಿ ಕೈಲಾದ ಮಟ್ಟಿಗೆ ಸಹಾಯ ಮಾಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಕನೀಜಾ ಫಾತಿಮಾ, ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಡಿಸಿಸಿ ಅಧ್ಯಕ್ಷ ಜಗದೇವಪ್ಪ ಗುತ್ತೇದಾರ, ಶರಣು ಮೋದಿ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here