ಕಲಬುರಗಿ, ಆಗಸ್ಟ. 20: ಛಾಯಾಚಿತ್ರಗಾರರಿಗೆ ಕೆಲ ಸಂದರ್ಭದಲ್ಲಿ ಛಾಯಾಚಿತ್ರವೂ ತಾಳ್ಮೆಯ ಪರೀಕ್ಷೆಯೂ ಸಹ ಆಗಿದ್ದು, ಉತ್ತಮ ಛಾಯಾಚಿತ್ರ ಸೆರೆಹಿಡಿಯಬೇಕಾದರೆ ಜಾಣ್ಮೆಯ ಪ್ರದರ್ಶನ ಅಗತ್ಯವಾಗಿದೆ ಎಂದರು. ಚಂದನ ಕಲರ್ ಲ್ಯಾಬ್‌ನ ಮಾಲೀಕರಾದ ಎಂ.ಎನ್.ಎಸ್.ಶಾಸ್ತಿçà ಅವರು ಹೇಳೀದ್ದಾರೆ.
ಅವರು ನಿನ್ನೆ ನಗರದ ಪತ್ರಿಕಾ ಭವನದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಏರ್ಪಿಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಛಾಯಾಗ್ರಾಹಕರ ಕೈಚಳಕವನ್ನು ಎಲ್ಲರಿಗೂ ಗೊತ್ತಿರಬಹುದು. ಆದರೆ, ತಾಂತ್ರಿಕ ಕೈಚಳಕವನ್ನು ಅಧ್ಯಯನ ಮಾಡಿದ್ದಲ್ಲಿ ಉತ್ತಮ ಗುಣಮಟ್ಟದ ಛಾಯಾಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಬಣ್ಣಗಳ ಮಿಶ್ರಣ, ಲೆನ್ಸ್ಗಳ ಸಂಕಲನ ಮುಂತಾದ ತಾಂತ್ರಿಕತೆಯನ್ನು ಕಲಿತುಕೊಳ್ಳುವಲ್ಲಿ ಆಸಕ್ತಿ ತೋರುವಂತೆ ಅವರು ಸಲಹೆ ನೀಡಿ, ತಾಂತ್ರಿಕೆಯ ವಿವರಗಳನ್ನು ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಭವಾನಿಸಿಂಗ ಠಾಕೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ, ಅರುಣ ಕದಮ್, ರಾಜಶೇಖರಯ್ಯ ಸ್ವಾಮಿ, ರಾಜು ದೇಶಮುಖ, ರಮೇಶ ಖಮಿತಕರ್, ಶ್ರೀಮತಿ ಭೀಮಬಾಯಿ ದೇಶಮುಖ ಸೇರಿದಂತೆ ಹಲವಾರು ಹಿರಿ-ಕಿರಿ ಪತ್ರಕರ್ತರು ಪಾಲ್ಗೊಂಡಿದ್ದರು.
ಪತ್ರಕರ್ತ ಸಂಗಮನಾಥ ರೇವತಗಾಂವ ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪನೆ ಗೈದರು, ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ಅವರು ಪ್ರಾರ್ಥನಾಗೀತೆ ಹಾಡಿದರು. ಆರಂಭದಲ್ಲಿ ದೇವೇಂದ್ರಪ್ಪ ಕಪನೂರ ಅವರು ಅತಿಥಿಗಳನ್ನು ಸ್ವಾಗತಿಸಿದರು.