ಕಲಬುರಗಿ, ಆಗಸ್ಟ. 19: ಕಳೆದ ಎರಡು ದಿನಗಳ ಹಿಂದೆ ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಬಂದೂಕಿನ ಸ್ವಾಗತ ಮಾಡಿರುವುದು ಬಿಜೆಪಿಯ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಟೀಕಿಸಿದ್ದಾರೆ.
ಅವರು ಗುರುವಾರ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತ, ಅತೀ ಶಿಸ್ತಿನ ಪಕ್ಷದ ಎಂದು ಹೇಳಿಕೊಳ್ಳುವ ಪಕ್ಷವೇ ಹೀಗೆ ಬಂದೂಕು ಹಿಡಿದು ಗೂಂಡಾ ಶಕ್ತ ಪ್ರದರ್ಶಿಸಿದಂತಾಗಿದೆ ಎಂದರು.
ಈ ರೀತಿ ಬಂದೂಕು ಹಿಡಿದು ಸ್ವಾಗತಕ್ಕೆ ಯಾರಾದರೂ ಪರವಾನಿಗೆ ಕೊಟ್ಟಿದ್ದೀರಾ? ಬಂದೂಕಿನಿAದ ಹಾರಿದ ಗುಂಡು ಆಕಸ್ಮಾತ ಯಾರಿಗಾದರೂ ತಗಲಿ ಅನಾಹುತವಾದರೆ ಅದಕ್ಕೆ ಯಾರು ಹೊಣೆ ಎಂದರು.
ಸ್ವತಃ ಕೇಂದ್ರದ ಸಚಿವರೊಬ್ಬರೇ ಈ ರೀತಿಯ ಸ್ವಾಗತ ಮಾಡಿಸಿಕೊಂಡಿದ್ದು, ಜನರನ್ನು ಬೆದರಿಸೋ ಈ ಸಂಸ್ಕೃತಿ ಅಕ್ಷಮ್ಯ ಅಪರಾಧವಾಗಿದ್ದು, ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಬದುಕಿದೆಯಾ ಎಂದು ಪ್ರಶ್ನಿಸಿದ ಅವರು ಬಂದೂಕಿನ ಸ್ವಾಗತ ಹಿಂದೆ ಯಾರಿದಾರೆ ಎಂಬುದು ಪತ್ತೆ ಮಾಡಿ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಡಳಿತ ಪಕ್ಷಕ್ಕೆ ಒಂದು ಕಾನೂನು ವಿರೋಧ ಪಕ್ಷಕ್ಕೆ ಒಂದು ಕಾನೂನಿದಿಯಾ? ಎಂದು ಪ್ರಶ್ನಿಸಿದ ಖಂಡ್ರೆ ಅವರು ಈ ರೀತಿಯ ಕೋವಿಡ್ ಸಂದರ್ಭದಲ್ಲಿ ಆಡಳಿತರೂಢ ಪಕ್ಷವೊಂದು ನಡೆದುಕೊಳ್ಳುತ್ತಿರುವುದು ತೀರ ನಾಚಿಗೇಡು ಮತ್ತು ಆಕ್ಷಮ್ಯ ಅಪರಾಧವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಜಗದೇವಪ್ಪ ಗುತ್ತೇದಾರ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.