ಕಲಬುರಗಿ, ಆಗಸ್ಟ. 18: ಕಲಬುರಗಿ ಮಹಾನಗರ ಪಾಲಿಕೆಗೆ ಮುಂದಿನ ತಿಂಗಳು ಸಪ್ಟೆಂಬರ್ 3ರಂದು 55 ವಾರ್ಡಗಳಿಗೆ ನಡೆಯಲಿರುವ ಚುನಾವಣೆಗೆ ಈಗಾಗಲೇ ಆಗಸ್ಟ 16ರಂದು ಜಿಲ್ಲಾಧಿಕಾರಿಗಳು ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ಅಂದಿನಿAದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆದರೆ ಕಳೆದ ಮೂರು ದಿನಗಳಿಂದ ಈವರೆಗೆ ಗುರುವಾರ ಒಂದು ನಾಮಪತ್ರ ಸಲ್ಲಿಕೆ ಆಗಿಲ್ಲ.
ನಾಮಪತ್ರಗಳ ಸಲ್ಲಿಕೆ ವಿಳಂಬಕ್ಕೆ ವಿವಿಧ ರಾಜಕೀಯ ಪಕ್ಷಗಳು ಪಕ್ಷದ ಅಧಿಕೃತ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯ ಗೊಂದಲಿದ್ದು, ಯಾರಿಗೆ ಸ್ಪರ್ಧೆಗಾಗಿ ಟಿಕೆಟ್ ನೀಡಿದರೆ ಎಲ್ಲಿ ಭಿನ್ನಮತ ಉಂಟಾಗುತ್ತದೋ ಎಂಬ ಭಯದಿಂದ ಅಳಿದು, ತೂಗಿ ಅಭ್ಯರ್ಥಿಗಳ ಆಯ್ಕೆಯ ಕಸರತ್ತಿನಲ್ಲಿ ನಿರತರಾಗಿದ್ದರಿಂದ ನಾಮಪತ್ರಗಳ ಸಲ್ಲಿಕೆ ವಿಳಂಬವಾಗುತ್ತಿದೆ.
ಬಿಜೆಪಿ, ಕಾಂಗ್ರೆಸ್ ಅಲ್ಲದೇ ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್ ಸೇರಿದಂತೆ ಆಮ್ ಆದ್ಮಿ ಅಲ್ಲದೇ ಹಲವಾರು ಪಕ್ಷಗಳು ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿದ್ದು, ಬಹುತೇಕ 20ರೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಲು ಯೋಚಿಸಿ, ಯೋಜನೆ ರೂಪಿಸಿವೆ.