ಕಲಬುರಗಿ, ಆಗಸ್ಟ. 18: ಮಹಾನಗರಪಾಲಿಕೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಮಯದಲ್ಲಿಯೇ ಮಹಾನಗರಪಾಲಿಕೆ ಅಧಿಕಾರಿಗಳು ವಿವಾವದವೊಂದನ್ನು ಮೈಮೇಲೆ ಎಳೆದು ಕೊಂಡಿದ್ದಾರೆ.
ಕಲಬುರಗಿ ನರದ ಯಮುನಾ ಕಾಲೋನಿಯ ಘಂಟೆ ಲೇಔಟ್‌ನಲ್ಲಿಯ ಖಾಸಗಿ ಜಾಗದಲ್ಲಿರುವ ಬಸವ ಮೂರ್ತಿ ದೇವಸ್ಥಾನವಿದ್ದು ಆ ದೇವಸ್ಥಾನವನ್ನು ತೆರವಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿರುವ ಘಟನೆ ಬೆಳಿಗ್ಗೆ ಜರುಗಿದೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಹರಿಹಾಯ್ದುದಲ್ಲದೇ, ವಾವ-ವಿವಾದ ನಡೆಯಿತು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೇವಸ್ಥಾನಗಳ ತೆರವಿಗೆ ಮುಂದಾಗಿರುವ ಪಾಲಿಕೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ಇಲ್ಲದೇ ದೇವಸ್ಥಾನ ತೆರವಿಗೆ ಮುಂದಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಿಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಬಿಡೋದಿಲ್ಲ ಅಂತಾ ಸ್ಥಳೀಯರ ಆಕ್ರೋಶವಾಗಿದ್ದು, ಚುನಾವಣೆ ಸಮಯದಲ್ಲಿ ಇಂತಹ ಕೆಲಸಕ್ಕೆ ಕೈ ಹಾಕಿದ ಆಧಿಕಾರಿಗಳು, ಸಾರ್ವಜನಿಕರ ಟೀಕಗೆ ಗುರಿಯಾಗಿದ್ದಾರೆ.
ಈ ಘಟನೆಯನ್ನು ಖಂಡಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಬಡಾವಣೆಯ ಸ್ಥಳೀಯರಿಂದ ನಗರದ ರಿಂಗ್ ರಸ್ತೆಯ ಖರ್ಗೆ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪಾಲಿಕೆ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.