ಕಲಬುರಗಿ, ಆಗಸ್ಟ. 15: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಹೇವಿ ಡ್ರಿಂಕರ್ ಆಗಿದ್ದರು ಎಂದು ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಹಗುರವಾಗಿ ಮಾತನಾಡಿರುವುದು ತೀವ್ರ ಖಂಡನೀಯವಾಗಿದೆ ಎಂದು ಸಂಸದ ಸದಸ್ಯರಾದ ಡಾ. ಉಮೇಶ ಜಾಧವ ಅವರು ಹೇಳಿದ್ದಾರೆ.
ಅವರಿಂದು ಡಿಎಆರ್ ಮೈದಾನದಲ್ಲಿ ಸ್ವಾಂತAತ್ರೊö್ಯÃತ್ಸವ ದಿನಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ವಾಜಪೇಯಿ ಅವರು ಒಬ್ಬ ಆದರ್ಶ ವ್ಯಕ್ತಿ ಆಗಿದ್ದರು, ಯುವಕರಿಗೆ ರೋಲ್ ಮಾಲಡ್ ಆಗಿದ್ದರು, ಅಂತಹವರ ಬಗ್ಗೆ ನಮ್ಮ ಭಾಗದ ನಾಯಕರು ಹೀಗೆ ಮಾತನಾಡಬಾರದು ಎಂದರು.
ಇತ್ತೀಚೆಗೆ ಸಿಟಿ ರವಿ ಅವರು ನೆಹರು ಬಗ್ಗೆ ಮಾತನಾಡಿರೋದು ನನಗೆ ಗೊತ್ತಿಲ್ಲ. ಸಿಡಿ ರವಿ ಅವರು ಮಾತನಾಡಬೇಕಾದರೆ ಬಹಳ ಬ್ಯಾಲೇನ್ಸ್ ಆಗಿ ಮಾತನಾಡುತ್ತಾರೆ, ನೆಹರೂ ಆಗಲಿ ವಾಜಪೇಯಿ ಆಗಲಿ ಯಾರೂ ಕೂಡ ಈ ರೀತಿಯಾಗಿ ಮಾತನಾಡಬಾರದು, ಈಗ ಇವರಿರ್ವರು ಜೀವಂತವಿಲ್ಲ, ಜೀವಂತವಿಲ್ಲದವರ ಬಗ್ಗೆ ಅವರ ಗುಣಗಾನ ಮಾಡಬೇಕೇ ಹೊರತು ಕೀಳಮಟ್ಟದಾಗಿ ಹೇಳಿಕೆ ನೀಡಬಾರದು ಎಂದು ನುಡಿದರು.
ಕೋಲಿ ಮತ್ತು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಚಾರವಾಗಿ ಸದನದಲ್ಲಿ ಹಲವಾರಿ ಬಾರಿ ಮಾತನಾಡಿದ್ದೇನೆ ಅಲ್ಲದೇ ನಾನೂ ರಾಜಕೀಯ ಬಂದು ಕೇವಲ 11 ವರ್ಷಗಳು ಮಾತ್ರ ಆಗಿದ್ದು, ಸಂಸದ ಸದಸ್ಯನಾದಾಗಿನಿಂದ ಕೋಲಿ ಕುರುಬ ಸಮಾಜಕ್ಕೆ ಗೋಂಡ ಸರ್ಟಿಫಿಕೆಟ್ ಕೊಡಿಸಲು ಬಹಳಷ್ಟು ಪ್ರಯತ್ನ ನಡೆಸುತ್ತಿದ್ದೇನೆ, ಆದರೆ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ನೋಡಿದರೆ ಅವರಿನ್ನು ಅವರು ತಮ್ಮ ತಂದೆಯ ಸೋಲಿನ ಶಾಕ್‌ನಂದ ಹೊರಬಂದಿಲ್ಲವೆನಿಸುತ್ತದೆ ಎಂದು ಡಾ. ಜಾಧವ ಹೇಳಿದ್ದಾರೆ.
ಕೋಲಿ ಮತ್ತು ಕುರುಬ ಜನಾಂಗಕ್ಕೆ ಗೊಂಡ ಸರ್ಟಿಫಿಕೆಟ್ ಕೊಡೊದಕ್ಕೆ ಯಾರು ಅಡ್ಡಿ ಬರ್ತಿದ್ದಾರೆ ಅನ್ನೊಂದು ಅವರಿಗೆ ಗೋತ್ತಿದೆ. ಇವೆರಡು ಸಮಾಜಕ್ಕಾಗಿ ನಾವೇನು ಮಾಡಿದ್ದೀವಿ ಎಂಬುದು ಅವರಿಗೆ ಪ್ರಿಯಾಂಕ್ ಖರ್ಗೆ ಅವರಿಗೆ ಗೊತ್ತಿದೆ ಎಂದರು.
ಬAಜಾರ, ಲಮಾಣಿ ಜನಾಂಗವನ್ನು ಎಸ್ಟಿಗೆ ಸೇರಿಸಲು ಯಾವುದೇ ಪತ್ರವೂ ಕೊಟ್ಟಿಲ್ಲ ಹಾಗೂ ಅದಕ್ಕಾಗಿ ಪ್ರಯತ್ನವೂ ಮಾಡುವುದಿಲ್ಲ ಎಂದು ಸ್ಟಷ್ಟವಾಗಿ ಹೇಳಿದ ಜಾಧವ ರಾಮರಾವ್ ಮಹಾರಾಜರು ನಮ್ಮ ಸಮಾಜದ ಬಗ್ಗೆ ಬಹಳ ಚಿಂತೆ ಮಾಡ್ತಾರೆ, ಅವರು ಪ್ರಧಾನಿ ಮೋದಿಗೆ ಯಾವುದೇ ಈ ತರಹದ ಮನವಿ ಪತ್ರ ಕೊಟ್ಟಿಲ್ಲ, ಇಂತಹ ಹೇಳಿಕೆ ನೀಡುವು ಮೂಲಕ ಪ್ರಿಯಾಂಕ್ ಖರ್ಗೆ ಅವರು ಜಾತಿ, ಜಾತಿ ಮಧ್ಯೆ ಜಗಳ ಹಚ್ಚಲು ಮುಂದಾಗಿದ್ದಾರೆ ಎಂದು ಖಾರವಾಗಿ ನುಡಿದರು.
ಉಮೇಶ ಜಾಧವ್‌ಗೆ ಪ್ರಶ್ನೆ ಮಾಡಿದ್ರೆ ಜಾಧವ ಚೇಲಾಗಳು ಉತ್ತರ ಕೊಡ್ತಾರೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಜಾಧವ ಅವರು ನಮಲ್ಲಿ ಯಾರು ಚೇಲಾಗಳು ಇಲ್ಲ. ನಮ್ಮ ಜೊತೆ ಇದ್ದವರು ಎಲ್ಲರೂ ಕಾರ್ಯಕರ್ತರು, ಕೆಲಸಗಾರರು ಇದ್ದಾರೆ, ನಾಣು ನಮ್ಮ ಕಾರ್ಯಕರ್ತರ ಮತ್ತು ಜನತೆಯ ಚೇಲಾ ಎಂದು ಉಚ್ಚರಿಸಿದ ಅವರು ಚೇಲಾಗಳು ಯಾರು ಇಟ್ಟಿದ್ದಾರೆ ಅವರಿಗೆ ಗೊತ್ತು, ಜನರಿಗೆ ಈ ರೀತಿಯ ಹೇಳಿಕೆ ನೀಡಿ ದಾರಿತಪ್ಪಿಸುವ ಕೆಲಸ ಮಾಡುವಲ್ಲಿ ಮುಂದಾಗಿದ್ದಾರೆ ಎಂದರು ಸಂಸತ್ ಸದಸ್ಯರು.
ಎಸ್ಸಿಯಿಂದ ಲಂಬಾಣಿ ಜನಾಂಗವನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ.
ಲಂಬಾಣಿ, ಬಂಜಾರ ಸಮಾಜವನ್ನು ಎಸ್ಸಿಯಿಂದ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ, ನಾವು ಇರುವುದು ಮೂಲತ:ಎಸ್ಸಿಯಲ್ಲಿ, ಅದರಲ್ಲೂ ಕಾಡು, ಬೀಡುಗಳಲ್ಲಿ ವಾಸಿಸುವ ನಮ್ಮ ಜನಾಂಗಕ್ಕೆ ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಲು ಸಾಧ್ಯವಿಲ್ಲ ಎಂದು ಸಂಸತ್ ಸದಸ್ಯ ಉಮೇಶ ಜಾಧವ ಹೇಳಿದ್ದಾರೆ.
ನಮ್ಮ ಭಾಗದ ಬಹುತೇಕ ಜನರು ತಾಂಡಾಗಳಲ್ಲಿ ವಾಸಿಸುತ್ತಿದ್ದು, ಅಲ್ಲೆ ಉಳಿಮೆ ಕೂಡ ಮಾಡುತ್ತಿದ್ದಾರೆ, ಅಂತಹವರಿಗಾಗಿ ಮನೆ ಮತ್ತು ಹೊಲದ ಹಕ್ಕು ಪತ್ರವನ್ನು ನೀಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ, ಶೀಘ್ರವೇ ಈ ಕಾರ್ಯ ತ್ವರಿತವಾಗಿ ಕಾರ್ಯಗತವಾಗಲು ಪ್ರಯತ್ನಿಸುವುದಾಗಿಯೂ ನುಡಿದರು.
Home Featured Kalaburagi ವಾಜಪೇಯಿ ಬಗ್ಗೆ ಪ್ರಿಯಾಂಕ್ ಹೇಳಿಕೆಗೆ ಜಾಧವ ಖಂಡನೆ ಎಸ್ಸಿಯಿAದ ಬಂಜಾರವನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ