ಕಲಬುರಗಿ, ಆಗಸ್ಟ. 12: ಈ ಬಾರಿಯ ಮಹಾನಗರಪಾಲಿಕೆಯ ಚುನಾವಣೆಯ ಕಾವು ತೀವ್ರತರವಾಗಿದ್ದು, ಪ್ರಸ್ತುತ ಪಕ್ಷಾಂತರಿಗಳ ಪರ್ವ ಶುರುವಾಗಲಿದ್ದು, ಕಾಂಗ್ರೆಸ್ ಪಕ್ಷವು ವಲಸಿಗರಿಗೆ ಟಿಕೆಟ್ ನೀಡದಿರಲು ತೀರ್ಮಾನಿಸಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಮೂಲಕ ಕಾಂಗ್ರೆಸ್ಸಗರಿಗೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಸಮಿತಿ ನಿರ್ಧರಿಸಿದೆ ಎಂದರು ಅವರು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೇ ಮಹಾನಗರಸಭೆಯಲ್ಲಿ ಕಾಂಗ್ರೆಸ್ಸ ಪಾರುಪಥ್ಯ ಸ್ಥಾಪಿಸಲು ಪಕ್ಷ ಸೂತ್ರಗಳನ್ನು ಹೆಣಿದಿದೆ ಎಂದು ಅವರು ಸುಳಿವು ನೀಡಿದರು.
ಕಳೆದ ಮಹಾನಗರಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್, ಮಹಾನಗರಪಾಲಿಕೆಯೆಂದರೆ ತಮ್ಮ ಜೀವ ಎಂಬAತೆ ಜೋಪಾನ ಮಾಡಿಕೊಂಡು ಬಂದಿದ್ದ ಮಾಜಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಅವರು ಮಹಾನಗರಪಾಲಿಕೆಯ ಟಿಕೆಟ್ ನೀಡಿಕೆಯಲ್ಲಿ ಮಾತ್ರ ಯಾರು ಮೂಗು ತೂರಿಸಬಾರದು, ಬೇಕಿದ್ದರೆ ಶಿಫಾರಸ್ಸು ಮಾಡಿದ್ದರೆ ಗೆಲ್ಲುವ ಯೋಗ್ಯ ಅಭ್ಯರ್ಥಿ ಯಾಗಿದ್ದರೆ ಅವರಿಗೆ ಮಾತ್ರ ಟಿಕೆಟ್ ನೀಡಿಕೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಎಷ್ಟು ಬಾರಿ ಮಹಾನಗರಪಾಲಿಕೆಗೆ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತಿತ್ತು.
ಈಗ ಬದಲಾದ ಸನ್ನಿವೇಶದಲ್ಲಿ ದಿ. ಖಮರುಲ್ ಇಸ್ಲಾಂ ಇಲ್ಲದ ಪಾಲಿಕೆ ಎಂಬಾAತಾಗಿ, ಮತ್ತೆ ಕಾಂಗ್ರೆಸ್ ಪಾಲಿಕೆಯ ಚುಕ್ಕಾಣಿ ಹಿಡಿಯಲು ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡುವ ಮೂಲಕ ಗೆಲುವಿನ ಕಾರ್ಯತಂತ್ರ ರೂಪಿಸುವಲ್ಲಿ ನಿರತವಾಗಿದೆ.