ಬೆಂಗಳೂರು, ಆಗಸ್ಟ. 10: ಭಾರತದ 76ನೇ ಸ್ವಾಂತ್ರೊö್ಯತ್ಸವದ ಧ್ವಜಾರೋಹಣವನ್ನು ಕಲಬುರಗಿಯಲ್ಲಿ ಆಗಸ್ಟ 15ರಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಉಸ್ತುವಾರಿ ಸಚಿವರಾದ ಮುರುಗೇಶ ರುದ್ರಪ್ಪ ನಿರಾಣಿ ಅವರು ನೆರವೇರಿಲಿದ್ದಾರೆ.
ಈ ಕುರಿತಂತೆ ಸರಕಾರದ ಆಧೀನ ಕಾರ್ಯದರ್ಶಿ (ರಾಜ್ಯ ಶಿಷ್ಟಾಚಾರ) ಅವರು ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಧ್ವಜಾರೋಹಣ ಮಾಡುವ ಸಚಿವರನ್ನು ನೇಮಕ ಮಾಡಿ ಆದೇಶ ಜಾರಿಮಾಡಿದ್ದಾರೆ.
ಬೀದರ ಜಿಲ್ಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ನೆರವೇರಿಸಲಿದ್ದಾರೆ.