ಕಲಬುರಗಿ, ಆಗಸ್ಟ. 09:ನೆರಾ ರಾಜ್ಯದಿಂದ ಕಲಬುರಗಿ ಪೋಲಿಸರ ಕಣ್ಣು ತಪ್ಪಿಸಿ ಕಳ್ಳಮಾರ್ಗವಾಗಿ ಪ್ರಯಾಣಿಕರು ಗಡಿ ಪ್ರವೇಶ ಮಾಡುತ್ತಿದ್ದಾರೆ.
ಈಗಾಗಲೇ ಎರಡನೇ ಅಲೇ ಸಾಕಷ್ಟು ಸಾವು-ನೋವುಗಳನ್ನುಂಟು ಮಾಡಿದ್ದು, ಮತ್ತೇ ಮೂರನೇ ಅಲೆಯ ಭೀತಿಯಲ್ಲಿರುವ ಕಲಬುರಗಿ ಜನತೆಗೆ ಕೋವಿಡ್ ಪರೀಕ್ಷೆಯಿಲ್ಲದೇ ಅಡ್ಡದಾರಿಯಿಂದ ಜಿಲ್ಲೆಗೆ ಬರುತ್ತಿರುವ ಪ್ರಯಾಣಿಕರಿಂದ ಮತ್ತಿಷ್ಟು ಭೀತಿ ಆವರಿಸಿದೆ.
ಗಡಿ ಭಾಗದಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿದ್ದು, ನೆಗೆಟಿವ ವರದಿ ಇದ್ದರೆ ಮಾತ್ರ ಗಡಿಯೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಆದರೆ ಹಿರೋಳ್ಳಿ ಚೆಕ್ ಪೋಸ್ಟ್ ಬಳಿ ಕಳ್ಳದಾರಿ ಮೂಲಕ ಜಿಲ್ಲೆಯನ್ನು ಮಹಾ ಪ್ರಯಾಣಿಕರು ಮಾಡುತ್ತಿದ್ದಾರೆ.
ಎಷ್ಟೆ ಪ್ರಯತ್ನಿಸಿದರೂ ತಡೆಯಲು ಸಾಧ್ಯವಾಗ ಹಿನ್ನೆಲೆಯಲ್ಲಿ ಇದರಿಂದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಗೆ ತೀವ್ರ ತಲೆನೋವಾಗಿ ಪರಿಣಿಮಿಸಿದೆ.
ಗಡಿ ಭಾಗದ ಯಾವುದೇ ಜಿಲ್ಲೆಯ ಚೆಕ್ ಪೋಸ್ಟ್ಗಳಲ್ಲಿ ನೆಗೆಟಿವ ವರದಿ ಕಡ್ಡಾಯಗೊಳಿಸಿದ ಪ್ರಯುಕ್ತ ಗಡಿ ಭಾಗದ ಪ್ರಯಾಣಿಕರು ತುರ್ತು ಕೆಲಸಗಳಿಗಾಗಿ ಕಳ್ಳದಾರಿ ಪ್ರವೇಶ ಮಾರ್ಗ ಹಿಡಿದಿದ್ದಾರೆ.