ಕಲಬುರಗಿ, ಆಗಸ್ಟ. 04: ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರರಾದ ಜಿ. ಎಮ್. ನಾಗರಾಜ್ ಅವರು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎ.ಸಿ.ಬಿ. ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಇಂದು ಮುಂಜಾನೆ ಯಶಸ್ವಿನಿ ಟೌನ್‌ಶಿಪ್ ಪ್ರಾಜೇಕ್ಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಣ್ಣಾಸಾಹೇಬ್ ಪಾಟೀಲ್ ಎಂಬುವವರ ಬಳಿ 1.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣನವರ್ ಅವರು ಬಿಸಿದ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳದಲ್ಲಿರುವ ಯಶಸ್ವಿನಿ ಟೌನ್‌ಶಿಪ್ ಪ್ರಾಜೆಕ್ಟ್ ಕಂಪನಿಯ ಲೇಔಟ್‌ನಲ್ಲಿ ಕುಡಿಯುವ ನೀರಿನ ಹಾಗೂ ಒಳಚರಂಡಿ ಕಾಮಗಾರಿ ಬಗ್ಗೆೆ ಕ್ಲೀಯರೆನ್ಸ್ ಸರ್ಟಿಫಿಕೆಟ್ ನೀಡಲು
3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಎಸಿಬಿಯವರನ್ನು ಸಂಪರ್ಕಿಸಿದ ಅಣ್ಣಾಸಾಹೇಬ್ ಅವರು ಕೂಡಲೇ 1.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಹಣ ಸಮೇತ ಮುಖ್ಯ ಇಂಜೀನಿಯರ್‌ರನ್ನು ಬಲೆಗೆ ಬೀಸಲಾಗಿದೆ.