ನವದೆಹಲಿ, ಆಗಸ್ಟ. 03: ಕಳೆದ ಮೂರು ದಿನಗಳಿಂದ ನಡೆದ ಕರ್ನಾಟಕದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಚೊಚ್ಚಲ ಸಂಪುಟ ವಿಸ್ತರಣೆಗೆ ನಾಳೆ ಅಂದರೆ ಬುಧುವಾರ ಮುರ್ಹೂತ ಫಿಕ್ಸ್ ಆಗಿದೆ.
ನಾಳೆ ಮಧ್ಯಾಹ್ನ 2.45ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಂಭವವಿದ್ದು, ಯಾರು ಯಾರು ಸಚಿವರಾಗುತ್ತಾರೆಂಬುದು ಇಲ್ಲಿಯವರೆಗೆ ನಿಗೂಢವಾಗಿದೆ.
ಇಲ್ಲಿಯವರೆಗೆ ಯಾವುದೇ ಬಿಜೆಪಿ ಶಾಸಕರಿಗೆ ಕರೆ ಮಾಡಲಾಗಿಲ್ಲ, ಅಲ್ಲದೇ ಈಗಾಗಲೇ ರಾಜ್ಯದ ಬಹುತೇಕ ಎಲ್ಲ ಶಾಸಕರುಗಳು ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದು, ಈ ಬಾರಿಯ ಸಂಪುಟ ವಿಸ್ತರಣೆಗೆ ಕೇಂದ್ರ ಸರಕಾರ ಬಹಳಷ್ಟು ಅಳಿದು, ತೂಗಿ ಪಟ್ಟಿ ತಯಾರು ಮಾಡಿದ್ದಾರೆಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಬಹುತೇಕವಾಗಿ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ, ಜೊತೆಗೆ ಯುವಕರಿಗೆ ಬೊಮ್ಮಾಯಿ ಅವರ ಸಂಪುಯದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಿದೆ.
ಕಳೆದ 2 ವರ್ಷಗಳಿಂದ ಕಲ್ಯಾಣ ಕರ್ನಾಟಕದ ಭಾಗಕ್ಕೆ ಕೇವಲ ಬೀದರ ನಿಂದ ಮಾತ್ರ ಒರ್ವ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು, ಕೇಂದ್ರ ಸ್ಥಾನವಾದ ಕಲಬುರಗಿಯನ್ನು ನಿರ್ಲಕ್ಷಿಸಲಾಗಿತ್ತು, ಆದರೆ ನಾಳೆಯ ಸಂಪುಟ ವಿಸ್ತರಣೆಯಲ್ಲಿ ಕಲಬುರಗಿಗೆ ಸ್ಥಾನ ಸಿಗುವ ಭವರವೆ ನೂರಕ್ಕೆ ನೂರಷ್ಟರಾಗಿದ್ದು, ಆದರೆ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ನಿಗೂಢವಾಗಿದೆ.
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರಿಬ್ಬರಲ್ಲಿ ಯಾರಿಗೂ ಸಿಗಬಹುದು ಅಲ್ಲದೆ ಇವರಿಬ್ಬರನ್ನು ಬಿಟ್ಟು ಬೇರೆ ಯಾರಿಗೂ ಸಿಕ್ಕರೆ ಅಚ್ಚರಿಯೇನಿಲ್ಲ. ಇದು ಬಿಜೆಪಿ ಸಂಸ್ಕೃತಿ.