ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಕಲಬುರಗಿ ಯೋಧ ಬಲಿ

0
1683
the militants were killed when they fired at the Dhalayi border on the Indian and Bangladesh border in Tripura.

ಕಲಬುರಗಿ, ಆಗಸ್ಟ 03:ಬಾಂಗ್ಲಾ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಯೋಧ ರಾಜಕುಮಾರ ಎಂ. ಮಾವಿನ ಅವರು ಇಂದು ಹುತ್ಮಾತರಾಗಿದ್ದಾರೆ.
ತ್ರಿಪುರಾ ರಾಜ್ಯದ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿರುವ ಧಲಾಯಿ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ಸಮಯದಲ್ಲಿ ಉಗ್ರರು ನಡೆಸಿದ ಏಕಾ ಏಕಿ ಗುಂಡಿನ ಫೈರಿಂಗ್‌ನಲ್ಲಿ ಎದೆಗೆ ಗುಂಡು ತಾಕಿ ಸ್ಥಳದಲ್ಲಿಯೇ ಹುತಾತ್ಮರಾದರು ಎನ್ನಲಾಗಿದೆ.
ವೀರಯೋಧನ ಸಾವಿನ ಸುದ್ದಿ ತಿಳಿದು ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಯೋಧನ ಪಾರ್ಥಿವ ಶರೀರ ಗುರುವಾರ ಗ್ರಾಮಕ್ಕೆ ಆಗಮಿಸುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here