ನವದೆಹಲಿ, ಆ 2: ಕಳೆದ ಒಂದು ವಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಸಾರಥ್ಯದ ಸಂಪುಟ ರಚನೆಗೆ ಒಂದೆರಡು ದಿನಗಳಲಿ ಮುಹೂರ್ತ ಫಿಕ್ಸ್ ಆಗಲಿದ್ದು, ರಾಜ್ಯದಲ್ಲಿ ನೂತನ ಸಂಪುಟ ರಚನೆಯ ಸರ್ಕಸ್ ಇಂದು, ಅಥವಾ ನಾಳೆಯೊಳಗೆ ಪೂರ್ಣವಾಗಲಿದ್ದು ಮೊದಲ ಹಂತದಲ್ಲಿ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೆಹಲಿ ಮೂಲಗಳು ಹೇಳಿವೆ .
ದೆಹಲಿಯಲ್ಲಿ ಸುದ್ದಿಗಾರರ ಜೊತೆ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಭಾವ್ಯ ಸಚಿವರ ಪಟ್ಟಿ ಇಂದು ಅಥವಾ ನಾಳೆಯೊಳಗೆ ಸಿದ್ದವಾಗಲಿದೆ ಎಂದರು. ಈಗಿರುವಂತ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಸೇರಿಸಿಕೊಂಡು ಹೋಗುವಂತಹ ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಎಲ್ ಶಾಸಕರಿಗೂ ಮಂತ್ರಿ ಪದವಿ ಕೊಡಲು ಆಗುವುದಿಲ್ಲ ಪ್ರಾದೇಶಿಕವಾಗಿಯೂ ಆಯ್ಕೆ ಮಾಡಬೇಕಿದೆ ಎಂದರು.
ವರಿಷ್ಠರನ್ನು ಭೇಟಿ ಮಾಡುತ್ತಿದ್ದೇನೆ. ಬಿಜೆಪಿ ಹೈಕಮಾಂಡ್ ನಿರ್ಧಾರದಂತೆ ಸಂಪುಟ ರಚನೆ ಆಗಲಿದೆ. ಸಮುದಾಯದ ದೃಷ್ಠಿಯಿಂದ, ಹಳಬರನ್ನು ಎಷ್ಟು ಜನರನ್ನು ಮುಂದುವರೆಸಬೇಕು. ಎಷ್ಟು ಜನರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಎಷ್ಟು ಹಂತದಲ್ಲಿ ಸಚಿವ ಸಂಪುಟ ರಚನೆ ಮಾಡಬೇಕು. ಎಷ್ಟು ಜನರಿಗೆ ಡಿಸಿಎಂ ಸ್ಥಾನ ಕೊಡಬೇಕು ಎನ್ನುವ ಕುರಿತಂತೆ ಇಂದು ಚರ್ಚೆಯಾಗಲಿದ್ದು ನಂತರವಷ್ಟೆ ಅಂತಿಮವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಈ ಬಾರಿಯ ಸಂಪುಟದಲ್ಲಿ ಅನೇಕ ಹೊಸ ಮುಖಗಳಿಗೆ ಅದ್ಯತೆ ನೀಡಲಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಬಾರಿ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಪ್ರಾದೇಶಿಕ ಅಸಮಾನತೆಯನ್ನು ಹೊಗಲಾಡಿಸುವ ಭರವಸೆ ಹೊಂದಲಾಗಿದೆ.