ಒಲಂಪಿಕ್ಸ್ 2021: ಪ್ರಥಮ ಬಾರಿಗೆ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ಮತ್ತು ಪುರುಷ ತಂಡಗಳು

0
747

ನವದೆಹಲಿ, ಆಗಸ್ಟ, 02: ಟೋಕಿಯೋ ಒಲಂಪಿಕ್ಸ್ನ ಇಂದು ನಡೆದ ಹಾಕಿ ಪಂದ್ಯದಲ್ಲಿ ಭಾರತದ ಹಾಕಿ ತಂಡ ನಾಯಕಿ ರಾಣಿ ರಾಮಪಾಲ್ ನೇತೃತ್ವದಲ್ಲಿ ಒಂದು ಗೋಲು ಬಾರಿಸುವ ಮೂಲಕ ಚಾಂಪಿಯನ್ ಆಸ್ಟೇಲಿಯಾ ಮಹಿಳಾ ತಂಡನವನು ಸೋಲುವ ಮೂಲಕ ಪ್ರಥಮ ಬಾರಿಗೆ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ.

ಇಂದು ನಡೆದ ಉಭಯ ತಂಡಗಳ ನಡುವಿನ ಕ್ವಾಟರ್ ಪೈನಲ್ ಪಂ ದ್ಯದಲ್ಲಿ ಮೊದಲ 15 ನಿಮಿಷಗಳ ಆಟದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ನಿಂದಾಗಿ ಆಸ್ಟೇಲಿಯಾ ತಂಡದ ವಿರುದ್ಧ 1 ಗೋಲು ಬಾರಿಸಿತು. ನಂತರ ಉಳಿದ ಅತ್ಯಲ್ಪ ಸಮಯದ ಆಟದಲ್ಲಿ ಆಸ್ಟೆçÃಲಿಯಾ ತಂಡವನ್ನು ಗೋಲು ಬಾರಿಸಿದಂತೆ ಬೌಲ್‌ನ್ನು ತಮ್ಮೆಡೆ ಸೆಳೆಯುವಲ್ಲಿ ಯಶಸ್ವಿಯಾಗಿ ಕೊನೆಯಲ್ಲಿ ರೋಜಕವಾಗಿ ಜಯಗಳಿಸಿದೆ.
ಈಗಾಗಲೇ ಈ ಒಲಂಪಿಕ್ಸ್ನ ಪುರುಷರ ಹಾಕಿ ತಂಡವು ಕೂಡ ಈಗಾಗಲೇ ಸೈಮಿಪೈನಲ್ ಪ್ರವೇಶಿಸಿದೆ. ಭಾರತದ ಮಹಿಳಾ ಮತ್ತು ಪುರುಷ ಉಭಯ ತಂಡಗಳೆರಡು ಸೆಮಿಫೈನಲ್ ಪ್ರವೇಶಿಸಿದ್ದು ಇದೇ ಮೊದಲ ಬಾರಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಅಭೂತ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ಮಹಿಳಾ ಹಾಕಿ ತಂಡದ ಗೋಲ್‌ಕೀಪರ್ ಸವಿತಾ ಪೂನಿಯಾ ಅವರು ಭಾರತದ ನೂತನ ಮಹಾಗೋಡೆಯಾಗಿ ಹೊರಹೊಮ್ಮಿದ್ದಾರೆ. ಭಾರತ ಸೆಮಿಫೈನಲ್‌ಗೇರುವಲ್ಲಿ ತಂಡದ ಮುಂಚೂಣಿ ಆಟಗಾರ್ತಿ ಗಲ್ಜಜಿತ್ ಕೌರ್ ಅವರು ಕಾರಣವಾಗಿದ್ದರೂ ಕೂಡ ಆಸ್ಟ್ರೇಲಿಯಾ ಗೋಲ್ ಬಾರಿಸದಂತೆ ನೋಡಿಕೊಂಡ ಸವಿತಾರ ಪಾತ್ರವು ಅಗಾಧವಾಗಿದೆ.
ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಕಿ ಆಟಗಾರ್ತಿಯರಿಗೆ 8 ಬಾರಿ ಗೋಲ್ ಗಳಿಸುವ ಅವಕಾಶವಿತ್ತಾದರೂ ಭಾರತದ ಗೋಲ್ ಕೀಪರ್ ಆಗಿದ್ದ ಸವಿತಾರ ಚುರುಕಿನ ಆಟದಿಂದಾಗಿ ಒಂದು ಗೋಲನ್ನು ಗಳಿಸದೆ ಆಸೀಸ್ ಆಟಗಾರ್ತಿಯರು ನಿರಾಸೆ ಅನುಭವಿಸಿದರು. ಭಾರತ ಹಾಕಿ ತಂಡದ ಉಪನಾಯಕಿಯೂ ಆಗಿರುವ ಸವಿತಾ ಪೂನಿಯಾರ ಆಟದ ವೈಖರಿಯನ್ನು ಎಲ್ಲರೂ ಕೊಂಡಾಡುತ್ತಿದ್ದು ಆಕೆಯನ್ನು ಭಾರತದ ಹೊಸ ಮಹಾಗೋಡೆಯೆಂದೇ ಬಿಂಬಿಸಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಉತ್ತಮ ಸಾಧನೆ ತೋರಿಸಲು ಎಡವಿದ್ದ ಭಾರತ ಆ ಋತುವಿನ ಗುಂಪು ಹಂತದಲ್ಲಿ ನಾಲ್ಕು ಸೋಲು ಹಾಗೂ ಜಪಾನ್ ವಿರುದ್ಧ ಡ್ರಾ ಮಾಡಿಕೊಂಡಿತ್ತು.
ರಿಯೋ ರಿಯೋ ಒಲಿಂಪಿಕ್ಸ್ನÀ ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 1-6 ರಿಂದ ಹೀನಾಯ ಸೋಲು ಕಂಡಿದ್ದ ಭಾರತೀಯ ಹಾಕಿ ವನಿತೆಯರು ಟೋಕಿಯೋ ರಿಯೋ ಒಲಿಂಪಿಕ್ಸ್ನಲ್ಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸುವ ಮೂಲಕ ಕ್ವಾರ್ಟರ್‌ಫೈನಲ್‌ನಲ್ಲಿ 1-0 ಯಿಂದ ಗೆಲ್ಲುವ ಮೂಲಕ ಸೆಮಿಫೈ£ಲ್‌ಗೆ ಏರುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here