ರಾಜ್ಯದಾದ್ಯಂತ ಸೈಬರ್ ಅಪರಾಧಗಳಿಗೆ ಕಡಿವಾಣಕ್ಕೆ ಗೋಲ್ಡನ್ ಅವರ್ ಯೋಜನೆ ಜಾರಿ

0
815
Procedure for filing a cybercrime complaint in India - iPleaders

ಬೆಂಗಳೂರು,ಆ.1- ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ನಗರದಲ್ಲಿ ಯಶಸ್ವಿಯಾಗಿರುವ ’ಗೋಲ್ಡನ್ ಅವರ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಕಳೆದ ವರ್ಷ ಡಿ. 22 ರಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ’ಗೋಲ್ಡನ್ ಅವರ್ ಜಾರಿ ತಂದಿದ್ದು ಅದು ಯಶಸ್ವಿಯಾಗಿರುವ ಬೆನ್ನಲ್ಲೇ ರಾಜ್ಯಾದ್ಯಂತ ವಿಸ್ತರಿಸಲು ಇಲಾಖೆ ಜಾರಿಗೊಳಿಸಲಿದೆ.
ಸೈಬರ್ ಕ್ರೈಂ ಇನ್ಸಿಡೆಂಟ್ ರಿಪೋರ್ಟ್ ಸಿಸ್ಟಂಗೆ ಮೂಲಕ ಸೈಬರ್ ಖದೀಮರಿಂದ ಹಣ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಕೂಡಲೇ 112 ಅಥವಾ 100 ಕ್ಕೆ ಕರೆ ಮಾಡಿದರೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ಗೆ ಕರೆ ವರ್ಗಾವಣೆಯಾಗಲಿದೆ.
ಘಟನೆ ಸಂಬAಧಿಸಿ ಕೂಡಲೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ, ಖಾತೆಯನ್ನು ಸ್ಥಗಿತಗೊಳಿಸಲಿದ್ದಾರೆ. ಹ್ಯಾಕ್‌ಗೆ ಒಳಗಾದ ಆಥವಾ ವಂಚನೆಗೆ ಒಳಗಾದ ಎರಡು ಗಂಟೆಯೊಳಗೆ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಿದರೆ ವಂಚಕರಿಗೆ ಹಣ ಎಗರಿಸಲು ಸಾಧ್ಯವಿಲ್ಲ. ಈ ಯೋಜನೆಯಿಂದ ಕಳೆದ ಏಳು ತಿಂಗಳಲ್ಲಿ ಬರೋಬ್ಬರಿ 50 ಕೋಟಿ ರೂ. ಸೈಬರ್ ವಂಚಕರ ಪಾಲಾಗುತ್ತಿದ್ದುದನ್ನು ತಪ್ಪಿಸಲಾಗಿದೆ.
ಅಪ್ಲಿಕೇಶನ್ ಅಪ್ಡೇಟ್: ಕಳೆದ ವರ್ಷ ನಗರದಲ್ಲಿಜಾರಿಯಾಗಿದ್ದ ಗೋಲ್ಡನ್ ಅವರ್ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ನೂತನ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮುಂದಾಗಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಈಗಾಗಲೇ ಸಾಫ್ಟ್ವೇರ್ ಹಾಗೂ ಅಪ್ಲಿಕೇಶನ್ ಅಪ್ಡೇಟ್ ಮಾಡಲಾಗುತ್ತಿದೆ.
ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಈ ತಿಂಗಳಾAತ್ಯಕ್ಕೆ ಈ ಯೋಜನೆ ಜಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲಾಕ್ ಸಿಸ್ಟಂ ಯೋಜನೆ: ಬ್ಯಾಂಕ್‌ಗಳ ಹೆಸರಿನಲ್ಲಿ ಕರೆ ಮಾಡುವ ಖದೀಮರು ಕ್ರೆಡಿಟ್ ಕಾರ್ಡ್ ನವೀಕರಣ, ಸಾಲ ನೀಡುವುದು ಸೇರಿದಂತೆ ವಿವಿಧ ಐಡಿಯಾಗಳನ್ನು ಉಪಯೋಗಿಸಿ ಓಟಿಪಿ ಕಳುಹಿಸಿಕೊಂಡು ಕ್ಷಣಾರ್ಧದಲ್ಲಿ ಗ್ರಾಹಕರ ಖಾತೆಗಳಿಂದ ಹಣ ಎಗರಿಸುತ್ತಿದ್ದ ಖದೀಮರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿಯೂ ವಿವಿಧ ಮಾರ್ಗಗಳಿಂದ ಜನರನ್ನು ಯಾಮಾರಿಸಿ ಹಣ ದೋಚುತ್ತಿದ್ದ ಸೈಬರ್ ಖದೀಮರಿಗೆ ಬ್ಯಾಂಕ್ ಅಕೌಂಟ್ ಬ್ಲಾಕ್ ಸಿಸ್ಟಂ ಯೋಜನೆ ಬ್ರೇಕ್ ಹಾಕಲಿದೆ. ಒಂದೇ ಸೈಬರ್ ಕಂಟ್ರೋಲ್: ಬೆಂಗಳೂರಿನAತಹ ಮಹಾನಗರದಲ್ಲಿ ಹೆಚ್ಚಾಗಿ ಗಮನ ಹರಿಸುತ್ತಿದ್ದ ಖದೀಮರು ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲಿಯೂ ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ, ತ್ವರಿತಗತಿಯಲ್ಲಿ ಉತ್ತಮವಾಗಿ ಬೆಳೆ ಬೆಳೆಯಲು ಕೆಮಿಕಲ್ ನೀಡುವ ಸೋಗಿನಲ್ಲಿ ಕರೆ ಮಾಡಿ ನಯವಾಗಿ ಮುಗ್ಧ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಹೆಚ್ಚಾಗಿ ವರದಿಯಾಗುತ್ತಿದೆ.
ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮೂರನೇ ಹಂತದ ನಗರಗಳಲ್ಲಿಯೂ ಸೈಬರ್ ಕೈಂ ಹೆಚ್ಚಾಗುತ್ತಿದೆ. ಹಾಗಾಗಿ ನಿಜಕ್ಕೂ ಯೋಜನೆ ಉತ್ತಮವಾಗಿದೆ ಎಂದು ಸೈಬರ್ ತಜ್ಞ ಫಣೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಮಗಳನ್ನು ಅನುಸರಿಸಿ: ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ಖದೀಮರು ಹಣ ವರ್ಗಾವಣೆ ಮಾಡುವುದು ಕಂಡುಬAದರೆ ಕೂಡಲೇ 112 ಗೆ ಕರೆ ಮಾಡಿಕರೆ ಮಾಡಿ
ನಿಮ್ಮ ಆಯ್ಕೆ 3 ನ್ನು ಒತ್ತಿದಾಗ ಸೈಬರ್ ಕಂಟ್ರೋಲ್ ರೂಮ್‌ಗೆ ಕರೆ ಹೋಗಲಿದೆಬ್ಯಾಂಕ್ ನಂಬರ್ ಸೇರಿದಂತೆ ಅಗತ್ಯ ಮಾಹಿತಿ ನೀಡಿಕೂಡಲೇ ಸಂಬAಧಿಸಿದ ಬ್ಯಾಂಕಿಗೆ ಮಾಹಿತಿ ನೀಡಿದರೆ ಯಾವ ಅಕೌಂಟ್ ನಂಬರ್‌ಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಪತ್ತೆ ಹಚ್ಚುತ್ತಾರೆ.
ನಂತರ ಸೈಬರ್ ಖದೀಮರ ಅಕೌಂಟ್ ನಂಬರ್ ಸೀಜ್ ಮಾಡಲಿದ್ದಾರೆ. ಹಣ ಕಡಿತವಾದ ಕೆಲವೇ ಗಂಟೆಗಳಲ್ಲಿ ಕರೆ ಮಾಡಿದರೆ ಕೂಡಲೇ ವಂಚಕರ ಬ್ಯಾಂಕ್ ಖಾತೆ ಸೀಜ್ ಮಾಡಲು ನೆರವಾಗಲಿದೆ. ಈ ವ್ಯವಸ್ಥೆ ಸದ್ಯ ಬೆಂಗಳೂರಿನಲ್ಲಿ ಮಾತ್ರ ಜಾರಿಯಲ್ಲಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.

LEAVE A REPLY

Please enter your comment!
Please enter your name here