ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 2ನೇ ಪದಕ ಕಂಚಿನ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧು

0
925

ನವದೆಹಲಿ, ಆ. 01: ಪುರುಷ ಪ್ರಧಾನ ದೇಶವಾದ ಭಾರತದಲ್ಲಿ 2021ನೇ ಸಾಲಿನ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಯಾವೊಬ್ಬ ಪುರುಷ ಕ್ರೀಡಾಪಟು ಯಾವುದೇ ಪದಕ ಗೆಲ್ಲಲಾಗಿಲ್ಲ, ಮತ್ತೇ ಇಲ್ಲಿಯೂ ಮಹಿಳೆಯರೇ ಸಾಧನೆ ಮಾಡಿದ್ದರು, ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕಣ್ಮಣಿಗಳು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿರುವುದು ಮಹಿಳೆಯರ ಸಾಧನೆಯಾಗಿದೆ.
ಭಾರತ ಇಲ್ಲಿಯ ವರೆಗೆ 2 ಪದಕಗಳನ್ನು ಗೆದ್ದಿದ್ದು, ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದರೆ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಕಂಚಿನ ಪದಕ ಗೆಲ್ಲೋ ಮೂಲಕ ದೇಶಕ್ಕೆ 2ನೇ ಪದಕ ದೊರಕಿಸಿ ಕೊಟ್ಟು ಸಾಧನೆ ಮಾಡಿದ್ದಾರೆ.
ಕಂಚಿನ ಪದಕ ವಿಜೇತೆ ಸಿಂಧೂ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯಾತೀಗಣ್ಯರು ಅಭಿನಂದಿಸಿದ್ದಾರೆ.

ಪಿವಿ ಸಿಂಧೂ ಅದ್ಭುತ ಪ್ರದರ್ಶನದಿಂದ ನಾವೆಲ್ಲ ಉತ್ಸುಕರಾಗಿದ್ದೇವೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆಯನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಸಿಂಧೂ ಭಾರತದ ಹೆಮ್ಮೆಯ ಕ್ರೀಡಾಪಟು, ಜೊತೆಗೆ ಅತ್ಯುತ್ತಮ ಒಲಿಂಪಿಯನ್ ಪಟು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಈ ಕಂಚಿನ ಪದಕ ಮೂಲಕ ಪಿವಿ ಸಿಂಧೂ ಮತ್ತೊಂದು ಸಾಧನೆ ಮಾಡಿದ್ದಾರೆ. 2 ಒಲಿಂಪಿಕ್ಸ್ ಕೂಟದಲ್ಲಿ ಸತತ 2 ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಿವಿಂ ಸಿಂಧು ಎರಡು ಒಲಿಂಪಿಕ್ಸ್ ಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ಸವರ ಸ್ಥಿರತೆ, ಕಠಿಣ ಹೋರಾಟ, ಪರೀಶ್ರಮದಿಂದÀ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ ಭಾರತಕ್ಕೆ ಕೀರ್ತಿ ತಂದ ಪಿವಿ ಸಿಂಧೂಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here