ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹ

0
843

ಕಲಬುರಗಿ, ಆ. 01: ಹಿಂದುಳಿದ ವರ್ಗದ ಹಿರಿಯ ನಾಯಕರಾದ ಕೆ. ಎಸ್. ಈಶ್ವರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವಗರ್ಗಗಳ ಒಕ್ಕೂಟ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ರವಿವಾರ ಒಕ್ಕೂಟದ ಅಧ್ಯಕ್ಷ ಮಹಾಂತೇಶ ಎಸ್. ಕೌಲಗಿ ಮತ್ತು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಈಶ್ವರಪ್ಪ ಅವರು ಕೂಡ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಷ್ಟ್ಟೆ ತಳಮಟ್ಟದಿಂದ ರಾಜ್ಯದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ, ಬಿಜೆಪಿ ಅದಿಕಾರಕ್ಕೆ ತರುವಲ್ಲಿ ತುಂಬಾ ಶ್ರಮಿಸಿದ್ದಾರೆ, ಈ ಹಿಂದೆ ಪಕ್ಷವು ಅಧಿಕಾರದಲ್ಲಿ ಇರುವಾಗ ಬಿಜೆಪಿಯ ರಾಜ್ಯಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು, ಆದರೆ ಪಕ್ಷದ ಹೈಕಮಾಂಡ್ ಇವರ ಸೇವೆಯನ್ನು ಇನ್ನು ಪರಿಗಣಿಸಿಲ್ಲ, ಮುಖ್ಯಮಂತ್ರಿ ಹುದ್ದೆಗೆ ಈಶ್ವರಪ್ಪ ಅವರು ಯೋಗ್ಯ ವ್ಯಕ್ತಿಯಾಗಿದ್ದರು, ಆದರೆ ಅದು ಆಗಲಿಲ್ಲ, ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಹೈಕಮಾಂಡದ ನಾಯಕರದಲ್ಲಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹಿರಿತನ ಮತ್ತು ಬಿಜೆಪಿ ಪಕ್ಷಕ್ಕೆ ದುಡಿಮೆಯ ಆಧಾರದ ಮೇಲೆ ಅವರಿಗೆ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಗೌರವಿಸಬೇಕೆಂದು ಮನವಿ ಅವರುಗಳು ಮನವಿ ಮಾಡಿದ್ದಾರೆ.
ಆದೇ ರೀತಿಯಲ್ಲಿ ಬಿಜೆಪಿಯಲ್ಲಿ ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಹಲವಾರು ಬಿಜೆಪಿ ಶಾಸಕರು, ಮಾಜಿ ಮಂತ್ರಿಗಳು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರಲ್ಲಿ ಕನಿಷ್ಠ 15 ಜನ ಹಿಂದುಳಿದ ವರ್ಗದ ಶಾಸಕರಿಗೆ ಕ್ಯಾಬಿನೆಟ್‌ನಲ್ಲಿ ಸಂಪೂಟ ದರ್ಜೆಯ ಸ್ಥಾನಮಾನ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹಾಗೆಯೇ ನಿಗಮ ಮಂಡಳಿಗಳಲ್ಲಿ ಕಲಬುರಗಿಯಲ್ಲಿರುವ ಹಿಂದುಳಿದ ವರ್ಗಗಳ ನಾಯಕರನ್ನು ಗುರುತಿಸಿ ಬಿಜೆಪಿ ಪಕ್ಷಕ್ಕೆ ದುಡಿದಿರುವ ಮತ್ತು ದುಡಿಯುತ್ತಿರುವ ನಾಯಕರನ್ನು ಗುರುತಿಸಿ ಮಂಡಳಿಗಳಲ್ಲಿ ಸ್ಥಾನಮಾನ ರೀಡದೇಕಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಆಯೋಗ ಒದ್ಧಪಡಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಜನಗಣತಿಯನ್ನು ಆದಷ್ಟು ಬೇಗನೇ ಸರಕಾರ ಸ್ವೀಕಾರ ಮಾಡಿ ಜನಸಂಖ್ಯೆ ಆಧಾರದ ಮೇರೆ ಅರ್ಥಿಕ ನೀತಿಯನ್ನು ಜಾರಿಗೆ ಇರಬೇಕು ಅಲ್ಲದೇ ಈ ಎಲ್ಲ ಅಂಶಗಳನ್ನು ಪರಿಗಣಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಬೆಲೆತೆತ್ತಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಬನೆವರಿ, ಸಂಘಟನಾ ಕಾರ್ಯದರ್ಶಿ ಹಣಮಯ್ಯ ಆಲೂರ, ಖಜಾಂಚಿ ಶಿವಾನಂದ ಅಣಜಗಿ, ಹಿಂದುಳಿದ ವರ್ಗಗಳ ಮುಖಂಡರಾದ ಲಚ್ಚಪ್ಪ ಜಮಾದಾರ, ನಿಂಗಪ್ಪ ಹೇರೂರ, ನಾಗಭೂಷಣ ಜುಮ್ಮಣ್ಣ, ಶರಣು ಕಣಗರ ಮತ್ತು ಬಸವರಾಜ ಬೂದಿಹಾಳ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here