ಅಫಜಪೂರದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಪತ್ರಕರ್ತರಾದವರು ನಿರ್ಭೀತಿಯಿಂದ ಸುದ್ದಿ ಬರೇಯಬೇಕು:ಎಂ.ವೈ.ಪಾಟೀಲ್

0
844

ಅಫಜಲಪುರ: ಪತ್ರಕರ್ತರಾದವರು ನಿರ್ಭಿತಿಯಿಂದ, ನಿರ್ಭೀಡೆಯಿಂದ ಸುದ್ದಿ ಬರೆಯಬೇಕು. ಸಮಸ್ಯೆಗಳ ವಿರುದ್ಧ ನ್ಯಾಯದ ಪರ ಇರದೆ. ವ್ಯಕ್ತಿನಿಷ್ಠ ವರದಿಗಿಂತ ವಸ್ತುನಿಷ್ಠರಾಗಿ ವರದಿ ಮಾಡಿದರೆ ಮಾತ್ರ ಪತ್ರಿಕಾ ಧರ್ಮÀ ಜೀವಂತ ಇರಲು ಸಾಧ್ಯವಿದೆ ಎಂದು ಶಾಸಕ ಎಂ. ವೈ. ಪಾಟೀಲ್ ಅವರು ಅಭಿಪ್ರಾಯ ಪಟ್ಟರು.
ಅಫಜಲಪೂರ ನಗರದ ಶಾರದಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ’ ಸಂಘದಿAದ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಯಾನ ಸಮಾರಂಭವನ್ನು ಉದ್ಭಾಟಿಸಿ ಮಾತನಾಡಿದ ಅವರು, ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಿದಾಗಲೇ ಪತ್ರಕರ್ತರಾಗಿದ್ದಕ್ಕೆ ಸಾರ್ಥಕ ಎಂದ ಅವರು, ಸುಮಾರು ದಿನಗಳಿಂದ ಪತ್ರಿಕಾ ಭವನದ ಬೇಡಿಕೆ ಇಟ್ಟಿದ್ದೀರಿ, ನೀವು ನಿವೇಶನ ತೋರಿಸಿದರೆ ಭವನ ನಿರ್ಮಾಣಕ್ಕೆ ಸೂಕ್ತ “ಅನುದಾನ ಒದಗಿಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಠಾಕೂರ ಅವರು ಮಾತನಾಡಿ, ಕೊವಿಡ್ 19ರ ಮಹಾಮಾರಿ ಸೋಂಕಿನ ಸಮಯದಲ್ಲಿ ಸರಕಾರ ಯಾರೂ ಹೊರಗಡೆ ಬರದೆ ಮನೆಯಲ್ಲಿಯೇ ಇರಲು ಸೂಚಿಸಿದಾಗ, ಪರ್ತಕರ್ತರು ಸಮಾಜದ ಸ್ವಾಸ್ಥö್ಯ ಕಾಪಾಡಲು ಜೀವದ ಹಂಗು ತೊರೆದು ಕೊರೊನಾ ಸಂದರ್ಭದಲ್ಲಿ ಮಾಡಿದ ಕೆಲಸ ಶ್ಲಾಘನೀಯವಾಗಿದೆ ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ವಗ್ಗ ಮಾತನಾಡಿ, ಸುಮಾರು ವರ್ಷಗಳಿಂದ ಪಟ್ಟಣದಲ್ಲಿ ಒಂದು ಪತ್ರಿಕಾ ಭವನ ನಿರ್ಮಿಸಬೇಕೆಂಬ ಕನಸಿದೆ. ಶಾಸಕರು ನಿವೇಶÀ ಮತ್ತು ಅನುದಾನ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಅಫಜಲಪೂರ ತಾಲೂಕಿನಲ್ಲಿನ ಮಾಧ್ಯಮವರು ಒಂದೇ ಕುಟುಂಬದ ಸದಸ್ಯರಂತಿದ್ದಾರೆ. ಈ ಒಗ್ಗಟ್ಟು ಸದಾ ಹೀಗೆ ಇರಲಿ ಎಂದರು.
ಇದೇ ವೇಳೆಗೆ ಸಂಯುಕ್ತ ಕರ್ನಾಡಿಕದ ಜಲ್ಲಾ ವರದಿಗಾರ. ಭೀಮಾಶಂಕರ ಫಿರೋಜಾಬಾದ್, ಹಿರಿಯ ಪತ್ರಕರ್ತರಾದ ಡಿ. ಶಿವಲಿಂಗಪ್ಪ, ಹಣಮಂತರಾವ್ ಬೈರಾಮಡಗಿ ಅವರನ್ನು ಮಾಧ್ಯಮ ರತ್ನ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಹಣಮಂತರಾವ್ ಭೈರಾಮಡಗಿ, ಮಾಧ್ಯಮ ಅಕಾಡಮಿ ಸದಸ್ಯ ದೇವಿಂದ್ರಪ್ಪ ಕಪನೂರ, ಹಿರಿಯ ಪತ್ರಕರ್ತ ಶಿವಲಿಂಗಪ್ಪ ದೊಡ್ಮನಿ ಮಾತನಾಡಿದರು.
ಪತ್ರಕರ್ತ ಎ.ಬಿಪಚೇಲ್ ಸೊನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಗುಂಡೇರಾವ್ ಬಿಂಗೋಳಿ ಅವರು ಮಾತನಾಡಿ, ತಾತ್ಕಾಲಿಕವಾಗಿ ಅಫಜಲಪೂರ ದಲ್ಲಿ ಶಾಸಕರ ಭವನ ಖಾಲಿಯಿದೆ ಅದನ್ನು ಪತ್ರಕರ್ತರಿಗಾಗಿ ಪತ್ರಿಕಾಗೋಷ್ಠಿ ಹಾಗೂ ಇತರೆ ಪತ್ರಕರ್ತರಿಗೆ ಸಂಬAಧಪಟ್ಟ ಕಾರ್ಯಕಗಳಿಗಾಗಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ಜಿಲ್ಲಾ ಸಂಘದ ಕೋಶಾಧ್ಯಕ್ಷರಾದ ರಾಜು ದೇಶಮುಖ, ಬಿಜೆಪಿ ಮುಖಂಡ ಶ್ರೀಶೈಲ್ ಬಳೂರ್ಗಿ, ‘ ಮಹಾಂತೇಶ ಪಾಟೀಲ್, ಮತೀನ್ ಪಟೇಲ್, ಶರಣು ಕುಂಬಾರ, ದಯಾನಂದ ದೊಡ್ಮನಿ, ಮಹಾಂತೇಶ ಬಡದಾಳ, ಶೈಲೇಶ ಗುಣಾರಿ, ಪ್ರಕಾಶ ಜಮಾದಾರ, ಸಿದ್ದಾರ್ಥ ಬರರಿಗಿಡ, ಚಂದು ಕರ್ಜಗಿ, ಚಂದು ದೇಸಾಯಿ, ಸಿಪಿಐ ಜಗದೇವಪ್ಪ ಪಾಳಾ, ಬಾಬುಮಿಯಾ ಪೂಲಾರಿ, ಬಸವರಾಜ ಚಾಂದಕವಟೆ, ಶ್ರೀಮಂತ ಬಿರಾದಾರ, ಬಸಣ್ಣ ಗುಣಾರಿ ಅವರುಗಳು ಭಾಗವಹಿಸಿದ್ದರು.
ತಾಲೂಕ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಮಠ ಸ್ವಾಗತಿಸಿದರೆ, ತಾಲೂಕ ಖಜಾಂಚಿ ಅಶೋಕ ಕಲ್ಲೂರ ವಂದಿಸಿದರು.

LEAVE A REPLY

Please enter your comment!
Please enter your name here