ಬೆಂಗಳೂರು, ಜುಲೈ. 27: ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಧರ್ಮೆಂದ್ರ ಪ್ರಸಾದ ಘೋಷಣೆ ಮಾಡಿದರು.
ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರ ಹೆಸರು ಸೂಚಿಸಿದ್ದು, ಅದಕ್ಕೆ ಸಚಿವ ಗೋವಿಂದ ಕಾರಜೋಳ ಅವರು ಅನುಮೋದಿಸಿದರು.
ಬಿಜೆಪಿ ಹೈಕಮಾಂಡ್‌ಗೆ ಬಿಜೆಪಿ ಎಲ್ಲ ಶಾಸಕರು ಕ್ಯಾರೆ ಅನ್ನದೇ ಹೌದು ಎನ್ನುವ ಮೂಲಕ ಸರ್ವಾನುಮತದಿಂದ ಆಯ್ಕ ಮಾಡಿದರು.
ನಾಳೆ ಮಧ್ಯಾಹ್ನ 3.30ಕ್ಕೆ ರಾಜ್ಯ 23ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಘೋಷಣೆಯಾಗುತ್ತಿದ್ದರೆ ಬಸವರಾಜ ಬೊಮ್ಮಾಯಿ ಅವರು ಬಿ. ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಈಗಾಗಲೆ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸರಕಾರ ರಚನೆಗೆ ಐವರು ನಾಯಕರೊಂದಿಗೆ ರಾಜ್ಯಪಾಲರಿಗೆ ಹಕ್ಕು ಮಂಡಿಸಲು ರಾಜಭವನಕ್ಕೆ ಹೊರಟಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ 3 ಬಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಧನ್ಯವಾದ
ನೂತನ ಸಿಎಂ ಆಗಿ ನೇಮಕಗೊಂಡ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ನರೇಂದ್ರ ಮೋದಿ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹಸಚಿವರಾದ ಅಮೀತಶಾ ಹಾಗೂ ನನ್ನನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಎಲ್ಲ ಬಿಜೆಪಿ ಶಾಸಕರಿಗೆ ಹಾಗೂ ನನ್ನ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿ ಆಶೀರ್ವದಿಸಿದ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೋಟಿ ಕೋಟಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಎಲ್ಲರನ್ನು ಹಿಂದಕ್ಕಿ ಬಸವರಾಜ ಬೊಮ್ಮಾಯಿ ಆಯ್ಕೆ ಆಶ್ಚರ್ಯವೆನ್ನಲ್ಲ, ಬಿಜೆಪಿ ಹೈಕಮಾಂಡ ಯಾರನ್ನು ಸಿಎಂ ಮಾಡುತ್ತಾರೆಂಬುದು ಅವರ ಪಕ್ಷದ ನಾಯಕರಿಗೆ ತಿಳಿಯದ ಗುಟ್ಟಾಗಿತ್ತು, ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಕುರಿತು ಯಾರು ತಮ್ಮ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಬೇಡಿ, ಯಾಕೆಂದರೆ ಹೈಕಮಾಂಡ್‌ನಿAದ ಯಾವಾಗಲೂ ನೀವೆ ಸಿಎಂ ಎಂದು ಸಂದೇಶ ಬರಬಹುದೆಂಬ ಟ್ವಿಟ್‌ಗಳು ಹರದಾಡುತ್ತಿದ್ದವು.
ಮೂವರು ಡಿಸಿಎಂಗಳ ಘೋಷಣೆ
ಲೀಮಗಾಯಿತ ಸಿಎಂ. ಆದರೆ ಉಪಮುಖ್ಯಮಂತ್ರಿಗಳಾಗಿ ಮೂರು ಜನರನ್ನು ಬಿಜೆಪಿ ಘೋಷಣೆ ಮಾಡಿದೆ. ಒಕ್ಕಲಿಗ, ದಲಿತ ಮತ್ತು ವಾಲ್ಕೀಕಿ ಜನಾಂಗಕ್ಕೆ ಈ ಡಿಸಿಎಂ ಸ್ಥಾನ ದಕ್ಕಿದೆ.
ಆರ್. ಆಶೋಕ, ಒಕ್ಕಲಿಗ, ಗೋವಿಂದ ಕಾರಜೋಳ ದಲಿತ ಮತ್ತು ವಾಲ್ಕೀಕಿ ಜನಾಂಗದ ಶ್ರೀರಾಮುಲು ಅವರುಗಳೆ ನೂತನ ಡಿಸಿಎಂ.ಗಳು.