ರಾಜ್ಯದಲ್ಲಿ ಇನ್ನು ಮೂರು ದಿನ ಭಾರಿ ಮಳೆ

0
895

ಬೆಂಗಳೂರು, ಜುಲೈ. 18: ರಾಜ್ಯದಲ್ಲಿ ಇನ್ನು ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ನಾಳೆಯಿಂದ 19ರಿಂದ 21ರ ವರೆಗೆ ರಾಜ್ಯದಾದ್ಯಂತ ಗುಡುಗು, ಸಿಡಲಿನೊಂದಿವೆ ವರುಣ ಅರ್ಭಟಿಸಲಿದ್ದಾನೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ರಾಜ್ಯದಾದ್ಯಂತ ನದಿ, ಹಳ್ಳ, ಕೊಳ್ಳ, ಜಲಾಶಯಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬಂದಿದ್ದು, ಜಲಾಶಯಗಳ ಒಳಹರಿವು ಹೆಚ್ಚಿದ್ದ ಹಿನ್ನೆಲೆಯಲ್ಲಿ ನೀರನ್ನು ಹೊರ ಬೀಡಲಾಗುತ್ತಿದೆ.
ಹಳ್ಳಕೊಳ್ಳಗಳು ಭರ್ತಿಯಾಗಿ ಹಳ್ಳಿಯಲ್ಲಿ ಜನರು ಓಡಾಡಲು ತೀವ್ರ ಅಡಚಣೆ ಜೊತೆಗೆ ಹೊಲ ಗದ್ದೆಗಳಿಗೆ ಹೋಗಲು ಅನಾನುಕೂಲವಾಗಿದೆ.

LEAVE A REPLY

Please enter your comment!
Please enter your name here