ನಾಳೆಯಿಂದ ಸಿನೇಮಾ, ಮಲ್ಟಿಫ್ಲೇಕ್ಸ್ ಪದವಿ ಕಾಲೇಜುಗಳು ಪುನರ್‌ರಾಂಭ

    0
    875

    ಬೆoಗಳೂರು, ಜುಲೈ. 18: ನಾಳೆಯಿಂದ ಜುಲೈ 19ರಿಂದ ರಾಜ್ಯದಾದ್ಯಂತ ಕಳೆದ 65 ದಿನಗಳಿಂದ ಮುಚ್ಚಲ್ಪಟ್ಟಿರುವ ಸಿನೇಮಾ ಹಾಲ್, ಮಲ್ಟಿಫ್ಲೇಕ್ಸ್ ಚಿತ್ರಮಂದಿರಗಳು ಅನಲಾಕ್ 4.0ರ ಅನ್ವಯ ಪುನರರಾಂಭಗೊಳ್ಳಲಿವೆ. ಆದರೆ ಪ್ರೇಕ್ಷಕರ ಅನುಪಾತ ಶೇ. 50ರಷ್ಟು ಮಾತ್ರ ನಿಗದಿಪಡಿಸಲಾಗಿದೆ.
    ಅನ್‌ಲಾಕ್ 3.0 ನಾಳೆ 19ರಂದು ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದು ಅನ್‌ಲಾಕ್ 4.0ನ್ನು ಜಾರಿಗೊಳಿಸಿದ್ದು, ರಾಜ್ಯದಾದ್ಯಂತ ಹಲವಾರು ಕ್ಷೇತ್ರಗಳಿಗೆ ಅವಕಾಶ ನೀಡುವ ಮೂಲಕ ಶೇ. 90ರಷ್ಟು ವಾಣಿಜ್ಯ ಉದ್ದಮ ಜೊತೆಗೆ ಹಲವಾರು ಶಿಕ್ಷಣ ಕ್ಷೇತ್ರಕ್ಕೂ ಸಡಿಲಿಕೆ ನೀಡಲಾಗಿದೆ.
    ಅಲ್ಲದೇ ಪದವಿ ಕಾಲೇಜುಗಳ ಪುನರ್ ಪ್ರಾರಂಭಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕಡ್ಡಾಯವಾಗಿ ವಿದ್ಯಾರ್ಥಿಗಳು ಲಸಿಕೆ ಪಡೆಯಬೇಕು, ಅಂತಹ ವಿದ್ಯಾರ್ಧಿಗಳಿಗೆ ಮಾತ್ರ ಕಾಲೇಜಿಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರದೊAದಿಗೆ ಕಾಲೇಜು ಆರಂಭಿಸಲು ಇಂದು ನಡೆದು ಅನ್ ಲಾಕ್ 4.0ರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.
    ರಾತ್ರಿ ಕರ್ಫ್ಯೂ ಸಮಯ ಕೂಡ ವಿಸ್ತರಿಸಲಾಗಿದ್ದು, ಹಿಂದಿದ್ದ 9ರ ಬದಲಾಗಿ ರಾತ್ರಿ 10 ಗಂಟೆಯಿAದ ಬೆಳಗಿನ ಜಾವ 5ರ ವರೆಗೆ ನಿಗದಿಪಡಿಸಲಾಗಿದೆ.
    ರಂಗ ಮಂದಿರ ಕೂಡಾ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿಸಿರುವ ಮುಖ್ಯಮಂತ್ರಿಗಳು, ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ಜೊತೆಗೆ ಪ್ರಸಾದಕ್ಕೂ ಅವಕಾಶ ನೀಡಿದ್ದಾರೆ.
    ಅನ್‌ಲಾಕ್ 4.0ದಲ್ಲಿ ಪಬ್‌ಗಳಿಗೆ ಅವಕಾಶ ಮತ್ತೆ ನಿರಾಕರಿಸಲಾಗಿದ್ದು, ಮೂರನೇ ಆಗಸ್ಟ ಅಂತ್ಯದಲ್ಲಿ ಬರುವ ಅಲೆಯ ಹಿನ್ನೆಲೆಯಲ್ಲಿ ಪಬ್‌ಗಳಿಗೆ ಅವಕಾಶ ನೀಡಲಾಗಿಲ್ಲ.
    ಚಿತ್ರ ಪ್ರದರ್ಶನಕ್ಕೆ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂದು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನಿರ್ಮಾಪಕರು ಹಾಗೂ ಚಿತ್ರರಂಗದ ಗಣ್ಯರು ಸಭೆ ಸೇರಿ ನಿರ್ಣಯ ಕೈಗೊಂಡು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
    ಈಗಾಗಲೇ ಹಲವಾರು ನಿರ್ಮಾಪಕರು ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದಾರೆ. ಇದಲ್ಲದೆ ಕಾರ್ಮಿಕರ ಪರಿಸ್ಥಿತಿಯೂ ಕೂಡ ಶೋಚನೀಯವಾಗಿz
    ಮೂರು ತಿಂಗಳ ನಂತರ ಚಿತ್ರಮಂದಿರಗಳು ಮತ್ತೆ ಆರಂಭಗೊಳ್ಳುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಅವಶ್ಯಕವಾಗಿದೆ. ಇದಲ್ಲದೆ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ ಎಂದು ಸಂಘವು ಹೇಳಿದೆ.

    LEAVE A REPLY

    Please enter your comment!
    Please enter your name here