ಕಲಬುರಗಿ, ಜುಲೈ 02:ಸ್ಪಷ್ಟ ರೂಪದಲ್ಲಿರದೆ ಅಗೋಚರವಾಗಿದ್ದ ವಚನಗಳನ್ನು ಸಂಪಾದಿಸಿ ಜನರ ಕೈಗೆಟಕುವಂತೆ ಮಾಡಿದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಜಯಂತಿ ಪ್ರಯುಕ್ತ ಅವರ ಜೀವನ ಸಂದೇಶಗಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸಾರಥ್ಯದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿರುವ ‘ಹಳಕಟ್ಟಿ ಹೊಸಸೃಷ್ಠಿ’ ಕಾರ್ಯಕ್ರಮಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.
ಸಂಶೋಧಕ ಮುಡುಬಿ ಗುಂಡೇರಾವ, ಸಾಹಿತ್ಯ ಪ್ರೇರಕರಾದ ಮಂಜುನಾಥ ಕಂಬಳಿಮಠ, ಶರಣರಾಜ್ ಛಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆಗಷ್ಟ್ ತಿಂಗಳಿನಲ್ಲಿ ವಚನ ಸಾಹಿತ್ಯ ಕುರಿತಾದ ಒಂದು ದಿನದ ಚಿಂತನಾಗೋಷ್ಠಿ ಆಯೋಜಿಸಲು ನಿರ್ಧರಿಸಲಾಗಿದ್ದು, ಮಾಜಿ ಸಚಿವರೂ ಆದ ಶಾಸಕ ಪ್ರಿಯಾಂಕ್ ಖರ್ಗೆ ಅವರು ನೇತೃತ್ವ ವಹಿಸಲಿದ್ದಾರೆ.