ಗೋಮಾತೆಯ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಆಧ್ಯ ಕರ್ತವ್ಯವಾಗಿದೆ ಶಾಸಕ ಡಾ.ಅವಿನಾಶ ಜಾಧವ

0
668

ಕಾಳಗಿ, ಜುಲೈ 02: ಸರ್ವರೋಗಗಳಿಗೂ ರಾಮಬಾಣವಾಗಿರುವ ಗೋಮಾತೆಯ ಸಂರಕ್ಷಣೆ ಮನುಷ್ಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಸಮಿಪದ ಸುಕ್ಷೇತ್ರ ರೆವಗ್ಗಿ (ರಟಕಲ್) ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಭಸ್ಮದ ಮಹಾಮನೆ ಹಾಗೂ ಗೋಶಾಲೆ ಯ ಕಟ್ಟಡಗಳನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
ಗೋವಿನ ಮೂತ್ರ ಹಾಗೂ ಸೇಗಣಿಯಲ್ಲಿ ಶೇಷ್ಠವಾಗಿರುವ ಶಕ್ತಿ ಅಡಗಿರುವುದರಿಂದ ಮನುಷ್ಯನಿಗೆ ಅಂಟಿಕೊAಡಿರುವ ನೂರಾರು ರೋಗಗಳು ಮಾಯವಾಗಿ ಹೊಗುತ್ತವೆ ಎಂದ ಶಾಸಕರು, ಯಾವುದೇ ರಾಸಾಯನಿಕ ವಸ್ತುಗಳನ್ನು ಬೆರೆಸದೆ ಶುದ್ಧ ಹಸುವಿನ ಸಗಣಿಯಿಂದ ತಯ್ಯಾರಿಸಲ್ಪಡುವ ‘ಭಸ್ಮದ ಮಹಾಮನೆ’ ನಿರ್ಮಾಣಮಾಡಿ ವಿಭೂತಿಗಳನ್ನು ತಯ್ಯಾರಿಸುತ್ತಿರುವುದು ಈ ಭಾಗದಲ್ಲಿ ಶ್ರೇಷ್ಠವಾದ ಕಾಯಕವಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಡಿಯಲ್ಲಿ ಬರುವ ಸುಕ್ಷೇತ್ರ ರೆವಗ್ಗಿ ರಟಕಲ್ ರೇವಣಸಿದ್ಧೇಶ್ವರ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಒಟ್ಟು 28 ಎಕರೆ ಜಮೀನಿನಲ್ಲಿ ಬೃಹದಾಕಾರದ ಬಾವಿತೋಡಿ, ಗೋಶಾಲೆ ನಿರ್ಮಿಸಿರುವುದು ಈ ಭಾಗದ ಭಕ್ತರ ಪರಿಶ್ರಮವಾಗಿದೆ.
ನನ್ನ ಮತಕ್ಷೇತ್ರದಲ್ಲಿ ಬರುವ ಈ ಪುಣ್ಯ ಭೂಮಿಯಲ್ಲಿ ನನ್ನನ್ನು ಕೆಲಸ ಮಾಡಲು ಕಲ್ಪಿಸಿರುವ ಜನತೆಯ ಆಶೆಯದಂತೆ ನನ್ನ ಅಧೀಕಾರದ ಅವಧಿಯಲ್ಲಿ ಇನ್ನೂ ಅಭಿವೃದ್ಧಿ ಮಾಡಿ ತೋರಿಸುವ ಹಂಬಲ ನನಗಿದೆ ಎಂದರು.
ಗೋಶಾಲೆಯಲ್ಲಿ ಸಧ್ಯ 82 ಗೋವುಗಳಿದ್ದು, ಅವುಗಳ ಪೋಷಣೆಗಾಗಿ ಇನ್ನೂ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಯ ಗೋಶಾಲೆ ಹಾಗೂ ಗೋವಿನ ಸಗಣಿಯ ವಿಭೂತಿ ತಯ್ಯಾರಿಕಾ ಕೇಂದ್ರಗಳು ಇಡಿ ನಮ್ಮ ಕಲ್ಯಾಣ ಕರ್ನಾಟಕದಲ್ಲಿಯೇ ವಿಶಿಷ್ಟ ವಾಗಿ ಕಂಗೊಳಿಸುವAತಾಹ ಮಾದರಿ ಕೇಂದ್ರಗಳಾಗಿ ಹೊರಹೊಮ್ಮಲಿದೆ ಎಂದರು.
ಹೊನ್ನಕಿರಣಗಿಯ ಚಂದ್ರಗುAಡ ಶಿವಾಚಾರ್ಯ, ಸುಗೂರ(ಕೆ) ಚನ್ನರುದ್ರಮುನಿ ಶ್ರೀಗಳು, ರಟಕಲ್ ರೇವಣಸಿದ್ಧ ಶ್ರೀಗಳು, ಚಂದನಕೇರಾದ ರಾಚೋಟೇಶ್ವರ ಶ್ರೀಗಳು, ರಟಕಲ್ ಸಿದ್ಧರಾಮ ದೇವರು, ಸೇಡಂ ಎಸಿ ರಮೇಶ ಕೋಲಾರ, ಕಾಳಗಿ ಗ್ರೇಡ್-1 ತಹಸೀಲ್ದಾರ್ ನಾಗನಾಥ ತರಗೆ, ಚಿಂಚೋಳಿ ತಹಸೀಲ್ದಾರ್ ಅರುಣಕುಮಾರ ಕುಲ್ಕರ್ಣಿ, ಮೇಘನಾ ಅವಿನಾಶ ಜಾಧವ, ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ ನಾವಿ, ಚನ್ನಬಸಪ್ಪ ದೇವರಮನಿ, ದತ್ತಾತ್ರೇಯ ರಾಯಗೋಳ, ಸಿದ್ದಯ್ಯ ಸ್ವಾಮಿ, ಸುರೇಶ್ ಪೆದ್ದಿ, ಶಾಂತಪ್ಪ ರೇವಗ್ಗಿ, ನಾಗೇಶ ಬಿರಾದಾರ, ಅಣ್ಣಾರಾವ, ಗಂಗಾಧರಸ್ವಾಮಿ, ಪರಮೇಶ್ವರ ಸದಲಾಪುರ, ರಾಮು ರಾಠೋಡ, ಶಿವಪುತ್ರಪ್ಪ ರೇವಗ್ಗಿ, ಪಿಎಸ್‌ಐಗಳಾದ ದಿವ್ಯಾ ಮಹಾದೇವ, ಇಂದುಮತಿ ಸೇರಿದಂತೆ ಅನೇಕರಿದ್ದರು.
ಗಮನ ಸೇಳೆದ ‘ಚಂಡಿ ಹೋಮ’
ಭಸ್ಮದ ಮಹಾಮನೆ ಹಾಗೂ ಗೋಶಾಲೆಯ ಲೋಕಾರ್ಪಣೆ ನಿಮಿತ್ಯ ಹೊನ್ನಕಿರಣಗಿಯ ಚಂದ್ರಗುAಡ ಶಿವಾಚಾರ್ಯರು ವೈದಿಕತ್ವದ ಲೋಕಕಲ್ಯಾಣಾರ್ಧವಾಗಿ ಏರ್ಪಡಿಸಲಾಗಿರುವ “ಚಂಡಿ ಹೋಮ” ವು ನೂರಾರು ಭಕ್ತರನ್ನು ಆಕರ್ಷಿಸುವಂತಿತ್ತು.
ಶಾಸಕ ಡಾ.ಅವಿನಾಶ ಜಾಧವ ದಂಪತಿಗಳು ಭಕ್ತಿಪೂರ್ವಕವಾಗಿ ಸತತ ಐದು ಗಂಟೆಗಳ ಕಾಲ ಕುಳಿತುಕೊಂಡು ಚಂಡಿ ಹೋಮ ಯಶಸ್ವಿ ಗೋಳಿಸಿದರು.

LEAVE A REPLY

Please enter your comment!
Please enter your name here