ಕಲಬುರಗಿ, ಜೂನ್. 19: ಕಳೆದ ಎರಡು ತಿಂಗಳಿAದ ಕೋವಿಡ್‌ನಿಂದಾಗಿ ಕೆಂಗೆಟ್ಟು ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟು ಆರಂಭಿಸಲು ಸೋಮವಾರದಿಂದ ಸಂಜೆ 5ರ ವರೆಗೆ ಸರಕಾರ ನೀಡಿದ ಅವಕಾಶಕ್ಕೆ ನಗರದ ವ್ಯಾಪಾರಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಪುಸ್ತಕ ವ್ಯಾಪಾರಿ ಮಹೇಶ ಭಾವಿಕಟ್ಟಿ ಅವರು ಪ್ರತಿಕ್ರಿಯಿಸಿ ಕಳೆದ 2 ವರ್ಷದಿಂದ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಬಂದ್ ಆಗಿದ್ದು, ನಮ್ಮ ವ್ಯಾಪಾರ ವಹಿವಾಟು ಹಳ್ಳಹಿಡಿದಿದೆ, ಸರಕಾರ ಆರಂಭಿಸಿದ ಆನ್‌ಲೈನ್‌ನಿಂದ ಪುಸ್ತಕ ಅಂಗಡಿಗಳ ಉದ್ಧಾರ ಆಗಲ್ಲ, ಬೇರೆ ವಾಣಿಜ್ಯ ಚಟುವಟಿಕೆಗಳು ಆರಂಭಿಸಿದAತೆ ಶಾಲಾ, ಕಾಲೇಜುಗಳು ಆರಂಭಗೊAಡರೆ ಮತ್ತೆ ನಮ್ಮ ವ್ಯಾಪಾರ ಮತ್ತೆ ಹಳಿ ಹಿಡಿಯಲಿದೆ ಎಂದು ಹೇಳಿದ್ದಾರೆ.
ಇನ್ನೊಬ್ಬ ಫುಟವೇರ್ ವ್ಯಾಪಾರಿಯೋರ್ವ ದಿನಾಲು ಅಂದರೆ ಜುಲೈ 5ರ ವರೆಗೆ 7ಗಂಟೆಗಳ ಕಾಲ ಚಪ್ಪಲಿ ಅಂಗಡಿಗಳನ್ನು ಆರಂಭಿಸಲು ಸರಕಾರ ನೀಡಿದ ಅನುಮತಿಯನ್ನು ಅವರು ಸ್ವಾಗತಿಸಿದ್ದಾರೆ.
ಹೀಗೆ ಫರ್ನಿಚರ್ ವ್ಯಾಪಾರಿಗಳು ಸೇರಿದಂತೆ ಅನುಮತಿಸಲಾದ ಎಲ್ಲ ವಾಣಿಜ್ಯ ಚಟುವಟಿಕೆಗಳ ಮಾಲೀಕರು ತಮ್ಮ ಹರ್ಷ ವ್ಯಕ್ತಪಡಿಸಿ, ಸರಕಾರ ಹೊರಡಿಸಿದ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವದಾಗಿ ಹೇಳಿದ್ದಾರೆ.