ಎರಡನೇ ಹಂತದಲ್ಲಿ 500 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ
ಬೆಂಗಳೂರು, ಜೂನ್. 03: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡೆಮೆಯಾಗುತ್ತಿದ್ದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಈ ಸಂಖ್ಯೆ ಹೆಚ್ಚಳವಾಗಬಾರದು ಈ ಹಿನ್ನೆಲೆಯಲ್ಲಿ ಆರೋಗ್ಯ ಪರಿಣಿತರು ನೀಡಿದ ವರದಿಯನ್ನು ಆಧಾರಿಸಿ ರಾಜ್ಯದಲ್ಲಿ ಸಂಪೂರ್ಣವಾಗಿ ಕೊರೊನಾ ನಿಯಂತ್ರಣ ಮಾಡಲು ಇನ್ನೊಂದು ವಾರ ಅಂದರೆ ಜೂನ್ 7ರ ಬೆಳಿಗ್ಗೆ 6 ರಿಂದ ಜೂನ್ 14ರ ಬೆಳಿಗ್ಗೆ 6ರ ವರೆಗೆ ಲಾಕ್‌ಡೌನ್ ಮುಂದುವರೆಸಿಲಾಗಿದೆ.
ಮುಖ್ಯಮAತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈ ಕುರಿತಂತೆ ಗುರುವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಮೇ 24ರ ರಿಂದ ಜೂನ್ 7ರ ವರೆಗೆ ಇದ್ದ ಮಾರ್ಗಸೂಚಿಗಳೇ ಈ ಮುಂದಿನ ಲಾಕ್‌ಡೌನ್‌ಗೆ ಅನ್ವಯವಾಗಲಿವೆ, ಅದರಲ್ಲಿ ಸ್ವಲ್ಪ ಮಟ್ಟಿದ ಬದಲಾವಣೆ ಮಾಡಲಾಗಿದೆ.
ಅಲ್ಲದೇ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಹಲವಾರು ಕಾರ್ಮಿಕ, ಶಿಕ್ಷಕ ವರ್ಗ ಸೇರಿದಂತೆ ಅರ್ಚಕರಿಗೆ, ಮೀನುಗಾರರಿಗೆ, ಸಣ್ಣ ಮಕ್ಕಳಿಗೆ ಮುಖ್ಯಮಂತ್ರಿಗಳು ಎರಡನೇ ಹಂತದಲ್ಲಿ 500 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಕೈಮಗ್ಗದಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮೀಕರಿಗೆ ತಲಾ 3000 ರೂ., ಅರ್ಚಕರು, ಅಡುಗೆ ಸಹಾಯಕರಿಗೆ ತಲಾ 3000 ರೂ., ಅಂಗನವಾಡಿ, ಆಶಾ ಕಾರ್ಯಕರ್ತರಿಗೆ, ಸಹಾಯಕರಿಗೆ ತಲಾ 2000 ರೂ., ಹಾಗೂ ಮೀನುಗಾರರಿಗೆ ತಲಾ 3000 ರೂ. ಪ್ರೋತ್ಸಾಹ ಧನ ನೀಡಲು ಸರಕಾರ ತೀರ್ಮಾನಿಸಿದೆ ಅದಂತೆ ಅನುದಾನಿತ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿ ಶಿಕ್ಷಕರಿಗೆ ರೂ. 5000 ರೂ., ಚಲನಚಿತ್ರ ಕಲಾವಿದರಿಗೆ, ದೂರದರ್ಶನ ಕಲಾವಿದರಿಗೆ ರೂ. 3000 ರೂ. ತಲಾ ಒಬ್ಬರಿಗೆ ನೀಡಲಾಗುವುದು ಎಂದು ಪ್ರಕಟಿಸಿದರು.
ಮೊದಲನೇ ಹಂತವಾಗಿ ಸುಮಾರು 1200 ಕೋಟಿ ರೂ.ಗಳ ಪ್ಯಾಕೇಜ್ ಹಾಗೂ ಎರಡನೇ ಹಂತದ 500 ಕೋಟಿ ರೂ.ಗಳ ಪ್ಕಾಕೇಜ್‌ನ್ನು ಒಂದು ವಾರದ ಒಳಗೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ತಂದು ಪೇಮೆಂಟ್ ಮಾಡಲು ಪ್ರಯತ್ನಿಸಲಾಗುವುದು ಎಂದರು ಮುಖ್ಯಮಂತ್ರಿಗಳು.
ಮಕ್ಕಳಿಗೆ ಅಂಗನವಾಡಿ ಮೂಲಕ ಪೂರೈಸಲಾಗುತ್ತಿರುವ ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ಈ ಎರಡು ತಿಂಗಳ ಕಾಲ ನೀಡಲು ಕೂಡಾ ತೀರ್ಮಾನಿಸಲಾಗಿದೆ ಎಂದರು.
ಸಣ್ಣ ಕೈಕಾರಿಗಳ ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ನೀಡಲಾಗುವುದು ಎಂದರು.