ತಾರತಮ್ಯದ ಪತ್ರಕರ್ತರ ವಿಮಾ ಭಾಗ್ಯ

0
760

ಕಲಬುರಗಿ, ಜೂನ್. 02: ಕರೊನಾ ಪ್ರಂಟ್‌ಲೈನ್ಸ್ ವಾರಿರ‍್ಸ್ ಎಂದು ಘೋಷಿಸಲ್ಪಟ್ಟ ಮಾಧ್ಯಮದವರಿಗೆ ಆರೋಗ್ಯ ವಿಮಾ ಯೋಜನೆ ಭಾಗ್ಯ ಕಲ್ಪಿಸಿರುವುದು ಸ್ವಾಗತಾರ್ಹ ಹಾಗೂ ಶ್ಲಾಘನೀಯವಾಗಿದೆ ಆದರೆ ಈ ವಿಮಾ ಯೋಜನೆ ಎಲ್ಲ ಪತ್ರಕರ್ತರಿಗೆ ಅನ್ವಯಿಸದೇ ಬರೀ ದೊಡ್ಡ ಪತ್ರಿಕೆಗಳ ಪತ್ರಕರ್ತರಿಗೆ ದೊರಕಿಸಿರುವುದು ತಾರತಮ್ಯದ ಸಂಗತಿಯಾಗಿದೆ.
ಬುಧುವಾರ ನಗರದ ಕಾಂಗ್ರೆಸ್ ಕಚೇರಿಯ ಗಾಂಧಿ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ದಿ. ಕಾಗಲ್‌ಕರ್ ಅವರ ಹೆಸರಿನಲ್ಲಿ ಒಂದು ವರ್ಷದ ಅವಧಿಗೆ ಕೊರೊನಾ ಸೇರಿದಂತೆ ಹಲವಾರು ಮಾರಕ ರೋಗಗಳ ರಕ್ಷಣೆಗಾಗಿ ಎರಡು ಲಕ್ಷ ರೂ. ವಿಮಾ ಭಾಗ್ಯವನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಜಿಲ್ಲೆಯ ಸಣ್ಣ ಸಣ್ಣ ಪತ್ರಿಕೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ತುಂಬಾ ಬೇಸರವಾಗಿದೆ ಎಂದು ಹೆಸರೆಹಲು ಇಚ್ಚಿಸದ ಪತ್ರಕರ್ತರೊಬ್ಬರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ವಿಮಾ ಸೌಲಭ್ಯವನ್ನು ಅವರು ಮಾಡಿರುವುದು ಕಾಂಗ್ರೆಸ್ ಪಕ್ಷದ ಒಡಬಂಡಿಕೆಯೊAದಿಗೆ ಅಲ್ಲದೇ ಸ್ವಂತ ಅವರ ಫೌಂಡೇಶ್‌ನಿAದ ಆದರೂ ಎಲ್ಲರಿಗೂ ವಿಮಾ ಸೌಲಭ್ಯ ವಿಸ್ತರಿಸಿದರೆ ಒಳ್ಳಯದಾಗುತ್ತದೆ ಎಂದರು.
ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮುಂಚೂಣಿ ಪತ್ರಕರ್ತರಿಗೆ ಈ ವಿಮಾ ಸೌಲಭ್ಯ ಒದಗಿಸಲಾಗಿದ್ದು, ಸಣ್ಣ ಪತ್ರಿಕೆಗಳಿಗೂ ಕೂಡಾ ಈ ಸೌಲಭ್ಯ ವಿಸ್ತರಣೆ ಮಾಡುವುದು ಬಿಡುವುದು ಸಂಘಟಕರಿಗೆ ಬಿಟ್ಟ ವಿಷಯವಾಗಿದೆ.
ದೊಡ್ಡ ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿ ಮತ್ತು ಭಾವಚಿತ್ರ ಪ್ರಕಟವಾಗುವುದರಿಂದ ಸಂಘಟಿಕರಿಗೂ ಲಾಭವಾಗುವುದು, ಲಾಭವಿಲ್ಲದ ವ್ಯವಹಾರ ಈಗ ಯಾವುದು ಉಳಿದಿಲ್ಲ, ಇದರಿಂದ ನಮಗೇನು ಲಾಭವೆಂಬ ಲೆಕ್ಕಾಚಾರವೇ ಇಂತಹ ಸಂಗತಿಗಳಿಗೆ ಸಾಕ್ಷಿಯಾಗಿದೆ.
ಮಾಧ್ಯಮ ಪ್ರತಿನಿಯೊಬ್ಬರ ಹೇಳಿಕೆ ಪ್ರಕಾರ ಈಗಾಗಲೇ 72 ಜನ ಪತ್ರಕರ್ತರ ಆಧಾರ ಕಾರ್ಡ ಪಡೆಯಲಾಗಿದೆ, ಆದರೆ ಯಾವ ಮಾನದಂಡದ ಮೇಲೆಯೂ ಪತ್ರಕರ್ತರೆಂದು ಗುರುತಿಸಿಲ್ಲ, ಪತ್ರಕರ್ತರೇ ಕೊಟ್ಟ ಲಿಸ್ಟ್ ಪ್ರಕಾರ ಈ 72 ಜನರನ್ನು ಆಯ್ಕೆ ಮಾಡಲಾಗಿದೆ ಎಂದರು.

LEAVE A REPLY

Please enter your comment!
Please enter your name here