ಕಲಬುರಗಿ, ಮೇ. 28: ಜಿಲ್ಲೆಯಲ್ಲಿ ಮಾರಕ ಸಾಂಕ್ರಾಮಿಕ ಸೋಂಕು ಕೋವಿಡ್‌ಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹೋಟೆಲ್‌ಗಳಲ್ಲಿ ಪಾರ್ಸಲ್ ಕೂಡ ನಿಷೇಧಿಸಿತ್ತು. ಆದರೆ ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಲು ನಾಳೆಯಿಂದ ದಿನಾಂಕ 29.5.2021ರಿಂದ ಬೆಳಿಗ್ಗೆ 6 ಗಂಟೆಯಿAದ ರಾತ್ರಿ 8 ಗಂಟೆಯವರೆಗೆ ಹೋಟಲ್‌ಗಳಲ್ಲಿ ಪಾರ್ಸಲ್ ಮತ್ತು ಆನ್‌ಲೈನ್ ಮುಖಾಂತರವು ಪಾರ್ಸಲ್ ಗೆ ಅವಕಾಶ ನೀಡಲಾಗಿದೆ ಎಂದು ಪೋಲಿಸ್ ಆಯುಕ್ತರಾದ ಡಾ. ವೈ. ಎಸ್. ರವಿಕುಮಾರ ಅವರು ತಿಳಿಸಿದ್ದಾರೆ.
ಈ ಮುಂಚೆ ಅಂದರೆ ಮೇ 27ರ ಬೆಳಿಗ್ಗೆ 6 ರಿಂದ ಮೇ 31ರ ವರೆಗೆ ಹೋಟೆಲ್‌ಗಳಲ್ಲಿ ಸಂಪೂರ್ಣ ಪಾರ್ಸಲ್‌ಗೂ ಅವಕಾಶ ಕಲ್ಪಿಸಿರಲಿಲ್ಲ, ಜನರಿಗೆ ಆಗುವ ತೊಂದರೆಯನ್ನು ಗಮನದಲಿಟ್ಟುಕೊಂಡು ಮತ್ತೇ ಹೋಟೆಲ್‌ಗಳಲ್ಲಿ ಪಾರ್ಸಲ್ ಅವಕಾಶ ಕಲ್ಪಿಸಲಾಗಿದೆ.
ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ನಗರದ ಕೆಲವು ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ಒಳಗಡೆ ಸೇವೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.