ನಮ್ಮ ಕೈಯಲ್ಲಿ ನಮ್ಮ ಆರೋಗ್ಯ ಆನ್ಲೈನ್ ಆರೋಗ್ಯದರಿವಿನ “ಸ್ವಾಸ್ಥ್ಯ ಸಂಪದ”

0
822

ಕಲಬುರಗಿ – ಕಲಬುರಗಿ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಹಾಗೂ ಜಾಲಿಹಾಳ ಗೌರಮ್ಮ ಸಂಗಬಸಯ್ಯ ಹಿರೇಮಠ ಪ್ರತಿಷ್ಠಾನ, ಇವೆರಡೂ ಸಂಸ್ಥೆಗಳ ಸಹಯೋಗದಲ್ಲಿ “ಸ್ವಾಸ್ಥ್ಯ ಸಂಪದ” ಎಂಬ ಆರೋಗ್ಯದರಿವಿನ ಆನ್ಲೈನ್ ಕಾರ್ಯಕ್ರಮವನ್ನು ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಸಾಯಂಕಾಲ 5 ಗಂಟೆಗೆ ಹಮ್ಮಿಕೊಳ್ಳಲಾಗುತ್ತಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಕವೈಸಾಪ ಕಾರ್ಯದರ್ಶಿ ಎಸ್. ಎಸ್. ಹಿರೇಮಠ ಅವರು ಕೋರಿದ್ದಾರೆ.
ವಾರಕ್ಕೆ ಎರಡು ದಿವಸ ಆನ್ಲೈನ್ ಮುಖಾಂತರ ನೇರ ಪ್ರಸಾರಗೊಳ್ಳುವ ಈ ‘ಸ್ವಾಸ್ಥ್ಯ ಸಂಪದ’ ಕಾರ್ಯಕ್ರಮದಲ್ಲಿ ನಾಡಿನ ಮತ್ತು ಸ್ಥಳೀಯ ಹೆಸರಾಂತ ತಜ್ಞ ವೈದ್ಯರು ಆರೋಗ್ಯದ ವಿವಿಧ ವಿಷಯಗಳ ಬಗ್ಗೆ ಮಾತನಾಡುವರು.
ಇಂದು ಸೋಮವಾರ, ಮೇ 24 ರಂದು ಪ್ರಸಾರಗೊಳ್ಳುವ ‘ಸ್ವಾಸ್ಥ್ಯ ಸಂಪದದ’ ಮೊದಲ ಕಂತಿನ ನೇರ ಪ್ರಸಾರಕ್ಕೆ ಹಾರಕೂಡ ಹಿರೇಮಠ ಸಂಸ್ಥಾನದ ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರು ಚಾಲನೆ ನೀಡುವರು. ಮತ್ತು ಬಸವರಾಜ ಪಾಟೀಲ ಸೇಡಮ್ ಅವರು ಶುಭ ಕೋರುವರು.

ತದನಂತರದಲ್ಲಿ, ಆಯುರ್ವೇದ ತಜ್ಞೆ ಡಾ. ನಿರ್ಮಲಾ ಕೆಳಮನಿ ಅವರು, ಹಿರಿಯ ಪತ್ರಕರ್ತ ದಿ. ಜಯತೀರ್ಥ ಕಾಗಲಕರ ಅವರ ಸ್ಮರಣಾರ್ಥ, “ಆಯುರ್ವೇದದಲ್ಲಿ ಮನೆ ಮದ್ದು” ಕುರಿತು ಉಪನ್ಯಾಸ ನೀಡುವರು.
ನಮ್ಮ ಈ “ಸ್ವಾಸ್ಥ್ಯ ಸಂಪದ”ದ ನೇರ ಆನ್ಲೈನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು “Cisco Webex” ಆಪ್ ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಮ್ಮ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಆಸಕ್ತರೆಲ್ಲರಿಗೂ ಮುಕ್ತ ಅವಕಾಶವಿದೆ.
ಕಲಬುರಗಿ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಮತ್ತು ಈ ಆನ್ಲೈನ್ ಆರೋಗ್ಯ ದರಿವಿನ ಕಾರ್ಯಕ್ರಮದ ಅತಿಥೇಯರೂ (ಊosಣ) ಆಗಿರುವ ಡಾ.ಶಶಿಶೇಖರರೆಡ್ಡಿ (ವಾಟ್ಸಪ್- +919448651961) ಅವರು ಈ ದಿಶೆಯಲ್ಲಿ ಖಾಯಂ “ವೆಬೆಕ್ಸ್ ಲಿಂಕ್ ವೊಂದನ್ನು” ಕಳುಹಿಸಿದ್ದಾರೆ.
ಅದು ಇಂತಿದೆ:
https://drshashishekharreddy.webex.com/meet/drshashishekharreddy
ಆಸಕ್ತ ವೀಕ್ಷಕರು ಈ ಲಿಂಕ್ ನ್ನು ಕ್ಲಿಕ್ ಮಾಡಿದರೆ ಸಾಕು; ಅವರು ಸಲೀಸಾಗಿ, ನಮ್ಮ ಈ ‘ಸ್ವಾಸ್ಥ್ಯ ಸಂಪದ’ದಲ್ಲಿ ಪಾಲ್ಗೊಳ್ಳಬಹುದು. ಎಸ್. ಎಸ್. ಹಿರೇಮಠ ಕಾರ್ಯದರ್ಶಿ,ಜಿಕವೈಸಾಪ ಮೊಬೈಲ್: 9342356222

LEAVE A REPLY

Please enter your comment!
Please enter your name here