ಕಲಬುರಗಿ,ಮೇ.೨೪:ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ, ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ,ಅರ್ಜುನ ಪರಿಶಿಷ್ಟ ಜಾತಿಯ ಯುವಕ ಕೆ.ಎಲ್. ಪುನೀತರನ್ನು ಕ್ಷುಲ್ಲಕ ಪ್ರಕರಣದಲ್ಲಿ ಅಕ್ರಮವಾಗಿ ಬಂಧಿಸಿ, ಎಫ್‌ಐಆರ್ ದಾಖಲಾಗದ ದಲಿತ ಯುವಕನನ್ನು ಠಾಣೆಯಲ್ಲಿ ಮನಸೋ ಇಚ್ಛೆ ಹೊಡೆದಿರುತ್ತಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಪುನೀತ ಬಾಯಾರಿ ಕುಡಿಯಲು ನೀರು ಕೇಳಿದ್ದಕ್ಕೆ ಆ ಸಂದರ್ಭದಲ್ಲಿ ಕಳ್ಳತನದ ಆರೋಪದಡಿ ಬಂಧಿತನಾದ ಚೇತನ ಎಂಬ ವ್ಯಕ್ತಿಗೆ ಮೂತ್ರವನ್ನು ಮಾಡುವಂತೆ ಬೆದರಿಸಿ ಅದನ್ನು ದಲಿತ ಯುವಕ ಪುನೀತನಿಗೆ ಬಲವಂತವಾಗಿ ಕುಡಿಯುವಂತೆ ಮಾಡಿರುವುದು ಇಡೀ ಮಾನವ ಕುಲಕ್ಕೆ ಅಪಮಾನವಾಗಿದ್ದು ಈ ಘಟನೆ ಅತ್ಯಂತ ಖಂಡನೀಯವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷರಾದ ಅವಿನಾಶ ಗಾಯಕವಾಡ ಅವರು ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಪ್ರಕರಣಕ್ಕೆ ಸಂಬAಧಿಸಿದAತೆ ಸಬ್ ಇನ್ಸ್ಪೇಕ್ಟರ್ ಈಗಾಗಲೇ ಅಮಾನತ್ತು ಮಾಡಲಾಗಿದ್ದು, ಇಂತಹ ಅಧಿಕಾರಿಯನ್ನು ಸೇವೆಯಿಂದಲೇ ಬಿಡುಗಡೆಗೊಳಿಸಿ ಕಠಿಣ ಶಿಕ್ಷೆ ವಿಧಿಸಬೇಕು ಅಲ್ಲದೇ ವಿಜಯಪುರದಲ್ಲಿ ಇಬ್ಬರು ದಲಿತ ಮುಗ್ದ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೋಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಈ ಇಬ್ಬರು ದಲಿತ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿ ಕೊಡಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಂದು ಅವರು ಸರಕಾರಕ್ಕೆ ಒತಾಯಿಸಿದ್ದಾರೆ.