ಜೂನ್ 7ರ ವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ

    0
    1318

    ಬೆಂಗಳೂರು, ಮೇ.21: ರಾಜ್ಯದಲ್ಲಿ ಮಿತಿಮೀರಿರುವ ಕರೊನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ತರುವ ಸಲುವಾಗಿ ಈಗಾಗಲೇ ವಿಧಿಸಲಾಗಿರುವ ಲಾಕ್‌ಡೌನ್ ಇನ್ನೆರಡು ದಿನಗಳಲ್ಲಿ ಮುಗಿಯಲಿದ್ದು ನಿರೀಕ್ಷೆಯಂತೆ ಇನ್ನೂ 14 ದಿನಗಳ ಕಾಲ ಲಾಕ್‌ಡೌನ್ ಮುಂದುವರಿಸಲಾಗಿದೆ.
    ಮೇ. 24ರ ಬೆಳಿಗ್ಗೆ 6 ರಿಂದ ಜೂ. 7ರ ಬೆಳಗ್ಗೆ 6 ಗಂಟೆಯವರೆಗೂ ರಾಜ್ಯದಲ್ಲಿ ಲಾಕ್‌ಡೌನ್ ಇರಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
    ಈಗಾಗಲೇ ಇರುವ ಎಲ್ಲ ನಿರ್ಬಂಧ-ನಿಯಮಗಳೂ ಯಥಾಪ್ರಕಾರ ಮುಂದುವರಿಯಲಿವೆ. ಆದರೆ ಅವುಗಳನ್ನು ಹಿಂದಿನಕ್ಕಿAತಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಹಿಂದೆ ವಿಧಿಸಲಾಗಿದ್ದ ಲಾಕ್‌ಡೌನ್ ಮೇ 24ಕ್ಕೆ ಮುಗಿಯಲಿದ್ದು, ಈಗ ಘೋಷಿಸಲಾಗಿರುವ ಲಾಕ್‌ಡೌನ್ ಮೇ 24ರಿಂದ ಜಾರಿಗೆ ಬರಲಿದ್ದು, ಜೂ. 7ರ ಬೆಳಗ್ಗೆ 6ರ ವರೆಗೂ ಅನ್ವಯಿಸಲಿದೆ.
    ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಈ ಕಠಿಣ ಕ್ರಮಜರುಗಿಸಲಾಗಿದ್ದು, ಜನತೆ ಈ ಹಿಂದಿನAತೆಯೇ ಸಹಕರಿಸಬೇಕು ಹಾಗೂ ಎಲ್ಲ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.

    LEAVE A REPLY

    Please enter your comment!
    Please enter your name here