ಬೆಂಗಳೂರು, ಮೇ. 21: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. 6 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬೆಂಗಳೂರಿನಲ್ಲಿ ಆಡ್ಮಿನಿಸ್ಟ್ರೇಟಿವ್ ( ಜೀಫ್ ಆಫೀಸ್) ಐಜಿಪಿಯಾಗಿದ್ದಂತ ಐಪಿಎಸ್ ಅಧಿಕಾರಿ ಕೆವಿ ಶರತ್ ಚಂದ್ರ ಅವರನ್ನು, ಹೊಸದಾಗಿ ಅಪ್ ಗ್ರೇಡ್ ಮಾಡಿದಂತ ಐಜಿಪಿ, ಫಾರೆಸ್ಟ್ ಸೆಲ್‌ಗೆ ವರ್ಗಾವಣೆ ಮಾಡಲಾಗಿದೆ.
1997ನೇ ಕರ್ನಾಟಕ ಗ್ರೇಡ್ ಐಪಿಎಸ್ ಅಧಿಕಾರಿ ಎಂ ನಂಜುAಡ ಸ್ವಾಮಿ, ಬಳ್ಳಾರಿ ವಲಯ ಐಜಿಪಿ ಇವರನ್ನು, ಬೆಂಗಳೂರಿನ ಬಂಧಿಕಾನೆಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಮನೀಶ್ ಖರ್ಬೀಕರ್ ಅವರನ್ನು ಕಲಬುರ್ಗಿಯ ನಾರ್ಥ್ ಇಸ್ಟ್ ವಿಭಾಗದ ಐಜಿಪಿ ಸ್ಥಾನದಿಂದ, ಬಳ್ಳಾರಿ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ರಾಘವೇಂದ್ರ ಸುಹಾಸ್ ಅವರನ್ನು ಬೆಳಗಾವಿಯ ನಾರ್ಥೆರೆನ್ ವಿಭಾಗದ ಐಜಿಪಿ ಸ್ಧಾನದಿಂದ ಎತ್ತಂಗಡಿ ಮಾಡಿ, ಬೆಂಗಳೂರಿನ ಆಂತರೀಕ ಭದ್ರತೆಯ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಐಪಿಎಸ್ ಅಧಿಕಾರಿ ಎನ್. ಸತೀಶ್‌ಕುಮಾರ್ ಅವರನ್ನು ಕಲಬುರ್ಗಿ ನಗರ ಐಜಿಪಿ ಸ್ಥಾನದಿಂದ ವರ್ಗಾವಣೆ ಮಾಡಿ, ಬೆಳಗಾವಿ ವಿಭಾದ ಐಜಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ.
ಇದಲ್ಲದೇ ವೈ. ಎಸ್. ರವಿಕುಮಾರ್ ಅವರನ್ನು ನೇಮಕಾತಿ ವಿಭಾಗದ ಡಿಐಜಿಪಿ ಸ್ಥಾನದಿಂದ ವರ್ಗಾವಣೆ ಮಾಡಿ, ಕಲಬುರ್ಗಿ ನಗರ ವ್ಯಾಪ್ತಿಯ ಡಿಐಜಿ ಹಾಗೂ ಕಮೀಷನರ್ ಆಫ್ ಪೊಲೀಸ್ ಆಗಿ ವರ್ಗಾವಣೆ ಮಾಡಿದೆ.