ಕಲಬುರಗಿ, ಮೇ. 16: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ವರದಿಯಾಗಿರುವಂತೆ ಕೊರೊನಾ ಸೋಂಕಿತರಿಗೆ ಅಂಟಿಕೊಳ್ಳುತ್ತಿರುವ ಮಾರಕ ಬ್ಲಾಕ್ ಫಂಗಸ್ ಈಗಾಗಲೇ ಕಲಬುರಗಿ ನಗರದಲ್ಲಿ ಪೋಲಿಸ್ ಪೇದೆಯೊಬ್ಬನನ್ನು ಬಲಿಪಡಿದಿದ್ದು ಇದನ್ನು ಜಿಲ್ಲಾಡಳಿತ ಸ್ಪಷ್ಟವಾಗಿ ಅಲ್ಲಗೆಳೆದಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸಾö್ನ ಅವರು ಬ್ಲಾö್ಯಕ್ ಫಂಗಸ್‌ನAತರ ಯಾವುದೇ ಪ್ರಕರಣಗಳು ನಗರದ ಯಾವ ಆಸ್ಪತ್ರೆಯಿಂದಲೂ ಕೂಡಾ ವರದಿಯಾಗಿಲ್ಲ ಅಲ್ಲದೆ ಮೃತಪಟ್ಟ ವ್ಯಕ್ತಿ ಪಾರ್ಶ್ಚವಾಯು ಎಂದು ಧೃಡೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಇಂತಹ ಘಟನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ವಿಚಾರಿಸಲಾಗಿ, ನಮಗೆ ಯಾವುದೇ ಆಸ್ಪತ್ರೆಯಿಂದ ಇಂತಹ ರೋಗಿಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇಲಾಖೆಗೆ ಮಾಹಿತಿ ನೀಡಿಲ್ಲ, ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಾವು ಇದನ್ನು ಹೇಗೆ ದೃಡೀಕರಿಸಬಹುದು ಎಂದು ಡಾ. ಶರಣಬಸಪ್ಪ ಗಣಜಲಖೇರ ಅವರು ಹೇಳಿದ್ದಾರೆ.
ಏನೇ ಇರಲೀ ಬ್ಲಾö್ಯಕ್ ಫಂಗಸ್ ಇದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಲ್ಯಾಬ್ ಟೆಸ್ಟ್ ಮಾಡಬೇಕು ಅಥವಾ ಮೃತವಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದಾಗಲೇ ಸತ್ಯಾಂಶ ತಿಳಿಯ ಬಹುದಾಗಿತ್ತು.
ಇದ್ಯಾವುದು ಮಾಡಿದ್ದಾರೂ ಇಲ್ಲವೋ ಎಂಬ ಬಗ್ಗೆ ತಿಳಿಯುತ್ತಿಲ್ಲ, ಈ ಬಗ್ಗೆ ಡಿಎಚ್‌ಓ ಅವರನ್ನು ವಿಚಾರಿಸಲಾಗಿ, ನಾನು ಬ್ಯೂಜಿ ಇದ್ದೀನಿ, ವಿಸಿನಲ್ಲಿ ಇದ್ದೀನಿ ನಂತರ ಕಾಲ್ ಮಾಡಿ ಎಂದು ಕಾಲ್ ಕಟ್ ಮಾಡುತ್ತಾರೆ.
ಈ ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ಅವರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ವಿವರವಾದ ವರದಿ ನೀಡುವಂತೆ ಮತ್ತು ಬ್ಲಾö್ಯಕ್ ಫಂಗಸ್ ಇರುವ ಬಗ್ಗೆ ಎದ್ದಿರುವ ಶಂಕೆ ಬಗ್ಗೆ ತನಿಖೆ ನಡೆಸಬೇಕೆಂದು ಹಲವಾರು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಕಲಬುರಗಿಯಲ್ಲಿ ಬ್ಲಾಕ್ ಫಂಗಸ್‌ನಿAದ ಪೋಲಿಸ್ ಪೇದೆ ಮಲ್ಲಿಕಾರ್ಜುನ ಬೆಳಗುಂಪಿ ಎಂಬುವವರು ನಿಧನವಾದ ಬಗ್ಗೆ ಕಳೆದ ಎರಡು ದಿನಗಳ ಹಿಂದ ಮನೀಷ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.
ಅಶೋಕನಗರ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕೆಲಸ ಮಾಡುತ್ತಿರುವ ಮಲ್ಲಿಕಾರ್ಜುನ ಬೆಳಗುಂಪಿ ಅವರು ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕಿನಿAದ ಬಳಲಿ ಆಸ್ಪತ್ರೆ ದಾಖಲಾಗಿದ್ದರು. ಸಂಪೂರ್ಣ ಗುಣಮುಖರಾಗಿಲ್ಲವಾದರೂ ಅವರು ತಂದೆಯವರ ಅಂತ್ಯಸAಸ್ಕಾರಕ್ಕೆ ಭಾಗಿಯಾಗಲು ಶಹಾಬಾದ ಹತ್ತಿರದ ಬೆಳಗುಂಪಿಗೆ ಹೋಗುತ್ತಿರುವ ಸಮದಯಲ್ಲಿ ತೀವ್ರ ಉಸಿರಾಟ ಸಮಸ್ಯೆ ಉಂಟಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು, ನಂತರ ಅವರು ಚೇತರಿಸಿಕೊಂಡು ಕೊರೊನಾ ನೆಗೆಟಿವ ವರದಿಗಾಗಿ ಕಾಯುತ್ತಿರುವಾಗಲೇ ಅವರಿಗೆ ಕಪ್ಪು ಶೀಲೀಂದ್ರದAಥಹ ಸಮಸ್ಯೆ ಎದುರಾಯಿತು ಎಂದು ಅವರು ಕುಟುಂಬದ ಮೂಲಗಳು ಹೇಳಿವೆ.
ಅವರ ಎರಡು ಕಣ್ಣುಗಳು, ಎರಡು ಕಾಲು, ಎರಡು ಕೈಗಳು ಹೇಗೆ ಎರಡೇ ದಿನದಲ್ಲಿ ಹೋಗಲು ಸಾಧ್ಯ. ಇದು ಬರಿ ಪಾರ್ಶ್ವವಾಯು ಆಗಿದ್ದರೆ ಇವರ ಕಣ್ಣು ಏಕು ಹೋಗುತ್ತಿದ್ದವು ಎಂಬ ಪ್ರಶ್ನೆ ಅವರದ್ದಾಗಿದೆ.