ಜೀಮ್ಸ್ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಎರಡು ಬೆಡ್‌ಗಳು

0
1663

ಕಲಬುರಗಿ, ಮೇ. 15: ಮಹಾಮಾರಿ ಕೋವಿಡ್ ಭಯಾನಕ ಎರಡನೇ ಅಲೇಯಲ್ಲಿ ಜನರು ಸೋಂಕಿನಿoದ ಬಳಲಿ, ಅವರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಪರದಾಡುತ್ತಿರುವ ಸಮಯದಲ್ಲಿ ಎಲ್ಲೋಬ್ಬ ಭೂಪ ಎರಡು ಬೆಡ್‌ಗಳನ್ನು ಬಳಸುವುದು ನೋಡಿದರೆ ಜೀಮ್ಸ್ನಲ್ಲಿ ನಡೆಯುತ್ತಾದರೂ ಏನು ಎಂಬುದು ಅನುಮಾನ ಹುಟ್ಟುವಂತಾಗಿದೆ.
ಜೀಮ್ಸ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಯೋರ್ವನು ಆಸ್ಪತ್ರೆಯ ಸ್ಟೇಷಲ್ ಕೊಣೆಯಲ್ಲಿ ಎರಡೆರಡು ಬೆಡ್‌ಗಳನ್ನು ಉಪಯೋಗಿಸುತ್ತ, ಒಂದು ಬೆಡ್‌ನಲ್ಲಿ ತಾನು ಮಲಗಿದರೆ ಇನ್ನೊಂದು ಬೆಡ್ ಮೇಲೆ ಬ್ಯಾಗ್, ಲ್ಯಾಪಟಪ್ ಉಪಕರಣಗಳು, ಟಾವಲ್ ಮುಂತಾದ ವಸ್ತುಗಳನ್ನು ಇಟ್ಟುಕೊಂಡು ರಾಜಾರೋಷವಾಗಿ ಐಷಾರಾಮಿ ಕೊಣೆಯಲ್ಲಿ ಚಿಕಿತ್ಸೆ ಪಡೆದು ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಈತ ಇರುವದಾದರೂ ಯಾರೂ, ರಾಜಕಾರಣೀಗಳ ಮಗನಾ, ಇರಲೀ ಯಾರೇ ಇರಲಿ ಎಲ್ಲರಿಗೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದೇ ಹೀಗಿದ್ದೂ ಈ ರೀತಿ ಅಂಧಾ ದರಬಾರ ಜೀಮ್ಸ್ನಲ್ಲಿ ನಡೆಯುತ್ತಿದ್ದರೂ ಯಾರೂ ಕೇಳುವರಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ವೇದಿಕೆಯ ಜಿಲ್ಲಾ ಅಧ್ಯಕ್ಷ ಸಂದೀಪ ಪಿ. ಭರಣಿ ಅವರು ಪ್ರಶ್ನಿಸಿದ್ದು, ಈ ಎಲ್ಲದರ ಬಗ್ಗೆ ನಮ್ಮ ಸಂಘಟನೆಯಿAದ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಇಂತಹ ಕೃತ್ಯವೆಸಗಿದ ಯಾರೆ ಇರಲಿ ಅವರ ವಿರುದ್ಧ ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here