ಕೊರೊನಾಗೆ ಚೌಕ್ ಠಾಣೆಯ ಎಎಸ್‌ಐ ಪಂಚಕಟ್ಟಿ ಬಲಿ

0
1348

ಕಲಬುರಗಿ, ಮೇ. 15: ಕಳೆದ ಮೂರು ದಶಕಗಳಿಂದ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎ.ಎಸ್.ಐ. ಮಲ್ಲಿಕಾರ್ಜುನ ಪಂಚಕಟ್ಟಿ ಅವರು ಇಂದು ಮಧ್ಯಾಹ್ನ ಕೊವಿಡ್‌ಗೆ ಬಲಿಯಾಗಿದ್ದಾರೆ.
ಪ್ರಸ್ತುತ ಅವರು ನಗರದ ಚೌಕ ಠಾಣೆಯಲ್ಲಿ ಎ.ಎಸ್.ಐ. ಆಗಿ ಕಾರ್ಯನಿರ್ವಹಿಸುತ್ತಿದ್ದರು, ಮುಂದಿನ ತಿಂಗಳು ಜೂನ್‌ನಲ್ಲಿ ಅವರು ನಿವೃತ್ತಿಯಾಗಲಿದ್ದರು.
ಕಳೆದ ಐದು ದಿನಗಳಿಂದ ಹಿಂದೆ ಕೊರೊನಾದಿಂದ ಬಳಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದರು.
ಸದಾ ಹಸನ್ಮುಖಿಯಾಗಿಯೇ ಠಾಣೆಯ ಸಿಬ್ಬಂದಿಯವರೊAದಿಗೆ ಅಷ್ಟೇ ಅಲ್ಲ, ಠಾಣೆಗೆ ಬರುವ ಪತ್ರಿಯೊಬ್ಬರೊಂದಿಗೂ ಅನೋನ್ಯವಾಗಿ ಮಾತನಾಡುತ್ತಿ ವ್ಯಕ್ತಿ ಇಂದು ನಿಧನ ಹೊಂದಿದ್ದು ನಮ್ಮಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದು ಚೌಕ್ ಠಾಣೆಯ ಪಿ.ಐ. ಎಸ್. ಆರ್. ನಾಯಕ ಅವರು ತಮ್ಮ ಕಂಬನಿ ಮಿಡಿದಿದ್ದು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here