ಧೀಮಂತ ನಾಯಕ ಕೆ.ಬಿ. ಶಾಣಪ್ಪ ಕೋವಿಡ್‌ಗೆ ಬಲಿ

0
1160

ಕಲಬುರಗಿ, ಮೇ. 9: ಕೋವಿಡಗೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಮತ್ತು ರಾಜ್ಯಸಭಾ ಮಾಜಿ ಸದಸ್ಯರಾದ ಕಮಲಾರ್ ಭೀಮ ಶಾಣಪ್ಪ ಕೆಬಿ ಎಂದೇ ಹೆಸರಾಗಿದ್ದ ಕೆ.ಬಿ. ಶಾಣಪ್ಪ ಅವರು ಬಲಿಯಾಗಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಅವರು ನಗರದ ಜೀಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟೀವ್ ಬಂದು ಚಿಕಿತ್ಸೆ ಪಡೆಯುತ್ತಿದ್ದು, ಇಂದು ರವಿವಾರ ಸಂಜೆ 4 ಗಂಟೆ ಸುಮಾರಿಗೆ ಅವರು ಇಹಲೋಕ ತ್ಯಜ್ಯಿಸಿದರು.
ಕೆ.ಬಿ. ಅವರು 16 ಮೇ 1938ರಂದು ಜನಿಸಿದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ರಾಜಕೀಯದಲ್ಲಿ ಹಲವಾರು ಏಳುಬೀಳು ಕಂಡ ಮೇರು ವ್ಯಕ್ತಿತ್ವದ ಶಾಣಪ್ಪ ಅವರು ಎಲ್ಲರಿಗೂ ಸಂಬೋಧಿಸುವುದು ಅಣ್ಣಾ ಎಂದೇ.
ದಿವAಗತರಿಗೆ ಅಶೋಕ, ವಿನೋದ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಅಪಾರ ಬಂಧು ಬಳವನ್ನು ಬಿಟ್ಟು ಅಗಲಿದ್ದಾರೆ.
ಕೆಬಿ ಅವರು ಮೂಲತ ಗುರುಪರಂಪರೆಯ ಶಿಕ್ಷಕ ವೃತ್ತಿಯಿಂದ ರಾಜ್ಯದ ಜನತೆಯ ಸೇವಾಮನೋಭಾವದಿಂದ ರಾಜಕೀಯಕ್ಕೆ ಬಂದವರಾಗಿದ್ದು, ಅವರು ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಶಾಸಕರೂ, ವಿಧಾನ ಪರಿಷತ್ ಸದಸ್ಯರೂ ಅಲ್ಲದ ಇದ್ದರೂ ಕೂಡ ಅವರು ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಶಹಾಬಾದ ಮತಕ್ಷೇತ್ರದಿಂದ ಎರಡು ಬಾರಿ ಶಾಕರಾಗಿ ಆಯ್ಕೆಯಾಗಿದ್ದ ಇವರು ಒಂದು ಬಾರಿ ರಾಜ್ಯಸಭಾ ಸದಸ್ಯರು ಹಾಗೂ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
2012ರಿಂದ ಭಾರತೀಯ ಜನತಾ ಪಕ್ಷದ ಸಕ್ರೀಯ ಸದಸ್ಯರಾಗಿದ್ದ ಅವರು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲಿಸಿ, ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡಿಯಾಗಿದ್ದರು.
ಭಾರತೀಯ ರಾಜಕಾರಣಿ. ಭಾರತೀಯ ಜನತಾ ಪಕ್ಷದ ಸದಸ್ಯರಾಗಿ, ಅವರು 2012 ರಲ್ಲಿ ಕರ್ನಾಟಕ ವಿಧಾನಸಭೆಯ ಮೇಲ್ಮನೆಯಾದ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡರು ಮತ್ತು 2018 ರವರೆಗೆ ಸದಸ್ಯರಾಗಿದ್ದರು.2006 ಮತ್ತು 2012 ರ ನಡುವೆ ಅವರು ಭಾರತೀಯ ಸಂಸತ್ತಿನ ಮೇಲ್ಮನೆಯ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ನಿರಂಕುಶಾಧಿಕಾರದ ವರ್ತನೆಯಿಂದ ಬೇಸತ್ತು ಅವರು ಜನತಾ ದಳ ತೊರೆದು 1998ರಲ್ಲಿ ಅವರು ಲೋಕಶಕ್ತಿ ಸೇರಿದರು. ಶಾನಪ್ಪ ಅವರು 1998 ರವರೆಗೆ ಜನತಾದಳದ ಸದಸ್ಯರಾಗಿದ್ದರು.
ಕರ್ನಾಟಕದ ಆಡಳಿತಾರೂಢ ಜನತಾದಳವುತನ್ನ ಸಂಸದೀಯ ಮಂಡಳಿ ಅಧ್ಯಕ್ಷ ಕೆ ಬಿ ಶಾನಪ್ಪ ಅವರು ಲೋಕಶಕ್ತಿ ಸೇರಲು ತ್ಯಜಿಸಿದಾಗ ಭಾರಿ ಹಿನ್ನಡೆ ಅನುಭವಿಸಿತು. ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ಆಪ್ತ ಸಹವರ್ತಿ ಎಂದು ಪರಿಗಣಿಸಲ್ಪಟ್ಟ ಮಾಜಿ ಸಚಿವ ಶಾನಪ್ಪ ಅವರು ಲೋಕಶಕ್ತಿಯನ್ನು ನೇರವಾಗಿ ಸೇರುವ ಮೊದಲ ಶಾಸಕರು. ಉಳಿದವರೆಲ್ಲರೂ ವೃತ್ತಾಕಾರದ ನವ ನಿರ್ಮಾಣ ವೇದಿಕೆಯನ್ನು ನಿರ್ಮಿಸಿದರು.

LEAVE A REPLY

Please enter your comment!
Please enter your name here