ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ 6 ಜಿಲ್ಲೆಗಳಿಗೆ ಆಂಬುಲೆನ್ಸ್ ವಾಹನ

0
956

ಕಲಬುರಗಿ,ಮೇ.6: ತೀವ್ರ ಅನಾರೋಗ್ಯದಿಂದ ಬಳಲುವ ರೋಗಿಗಳನ್ನು ತರ‍್ತಾಗಿ ಅಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಕಲ್ಯಾಣ ರ‍್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಲಬುರಗಿ ವಿಭಾಗದ ಆರು ಜಿಲ್ಲೆಗಳಿಗೆ ಮುಂದುವರಿದ ಜೀವರಕ್ಷಕ ತಂತ್ರಜ್ಞಾನವುಳ್ಳ ಆಂಬುಲೆನ್ಸ್ ವಾಹನಗಳನ್ನು ಒದಗಿಸಿದ್ದು, ಗುರುವಾರ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅಂಬುಲೆನ್ಸ್ ವಾಹನಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು, ಕಲ್ಯಾಣ ರ‍್ನಾಟಕ ಭಾಗದ 6 ಜಿಲ್ಲೆಗಳಿಗೆ ಒಟ್ಟು 9 ಆಂಬುಲೆನ್ಸ್‍ಗಳನ್ನು ನೀಡಲಾಗಿದೆ. ಕಲಬುರಗಿ, ಯಾದಗಿರಿ ಹಾಗೂ ಬಳ್ಳಾರಿಗೆ ತಲಾ 2, ಬೀದರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ 1 ಸುಸಜ್ಜಿತ ಆಂಬುಲೆನ್ಸ್ ವಾಹನ ಒದಗಿಸಲಾಗಿದೆ. ಜೀವರಕ್ಷಕ ತಂತ್ರಜ್ಞಾನವುಳ್ಳ ಆಂಬುಲೆನ್ಸ್ ವಾಹನಗಳಾದ ಇವುಗಳಲ್ಲಿ ಹೆಚ್ಚಿನ ವೈದ್ಯಕೀಯ ಸಲಕರಣೆಗಳಿರುವುದರಿಂದ ತಲಾ ಒಂದು ಆಂಬುಲೆನ್ಸ್ ವಾಹನಕ್ಕೆ ಮಂಡಳಿಯು ಅಂದಾಜು 50 ಲಕ್ಷ ರೂ. ವೆಚ್ಚ ಮಾಡಿದೆ ಎಂದು ಅವರು ವಿವರಿಸಿದರು.
ಕೋವಿಡ್ ಸಂಕಷ್ಟ ಎದುರಾಗಿರುವ ಈ ಸಂರ‍್ಭದಲ್ಲಿ ರೋಗಿಗಳ ಜೀವರಕ್ಷಣೆಗೆ ಈ ಆಂಬುಲೆನ್ಸ್‍ಗಳು ತುಂಬಾ ಸಹಕಾರಿಯಾಗಲಿವೆ. ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಂಡಳಿ ವತಿಯಿಂದ ಪ್ರದೇಶದ ಜಿಲ್ಲಾಡಳಿತಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಕೆಲವು ಜಿಲ್ಲಾಧಿಕಾರಿಗಳು ಇನ್ನೂ ಹೆಚ್ಚುವರಿಯಾಗಿ ಆಂಬುಲೆನ್ಸ್ ವಾಹನಗಳು ಬೇಕು. ಆಮ್ಲಜನಕ ವ್ಯವಸ್ಥೆ ಆಗಬೇಕು ಎಂದು ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಇದನ್ನು ಸೂಕ್ತವಾಗಿ ಪರಿಶೀಲಿಸಿ ನರ‍್ಧಾರ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕರ‍್ಯರ‍್ಶಿ ಹಾಗೂ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ಅವರು ಮಾತನಾಡಿ ಕೋವಿಡ್ ಸಂಕಷ್ಠ ಹಿನ್ನೆಲೆಯಲ್ಲಿ ಮಂಡಳಿ ಅಧ್ಯಕ್ಷರು ನವೀನ ತಂತ್ರಜ್ಞಾನವುಳ್ಳ ಆಂಬುಲೆನ್ಸ್ ವಾಹನಗಳು ಜಿಲ್ಲೆಗೆ ನೀಡಬೇಕು ಎಂದು ನರ‍್ಧರಿಸಿದ ಕಾರಣ ಅಲ್ಪಾವಧಿಯಲ್ಲಿಯೆ ಟೆಂಡರ್ ಕರೆದು, ಈಗ ಆಂಬುಲೆನ್ಸ್‍ಗಳನ್ನು ಜನರ ಸೇವೆಗೆ ಇಂದು ನೀಡಲಾಗಿದೆ ಎಂದು ತಿಳಿಸಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಗನ್ ಧಾರವಾಡಕರ್, ಜಿಮ್ಸ್ ನರ‍್ದೇಶಕಿ ಡಾ. ಕವಿತಾ ಪಾಟೀಲ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here