ನವದೆಹಲಿ, ಮೇ. 04: ಈ ಶತಮಾನದ ಮಹಾಮಾರಿ ಕೊರೊನಾ ಸೋಂಕು ಐಪಿಎಲ್‌ಕ್ಕೂ ಕಾಲಿಟ್ಟಿದ್ದು, ಮುಂದಿನ ಎಲ್ಲ ಪಂದ್ಯಗಳನ್ನು ಮುಂದೂಡಿ ಬಿಸಿಸಿಐ ಇಂದು ಆದೇಶ ಹೊರಡಿಸಿದೆ.
ಕೆಕೆಆರ್ ತಂಡದ ಇಬ್ಬರು ಆಟಗಾರರಾದ ವರುಣ ಚಕ್ರವರ್ತಿ ಹಾಗೂ ವಾರಿಯರ್ಸಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿ ತಂಡದ ಅಮೀತ ಮಿಶ್ರಾ, ಸನ್‌ರೈಜರ್ಸ್ ಹೈದ್ರಾಬಾದ ತಂಡದ ಒಬ್ಬ ವೃದ್ಧಮಾನ ಸಾಹಾ ಅಲ್ಲದೇ ಸಿಎಸ್ಕೆ ತಂಡ ಸಿಇಓ ಕಾಶಿ ವಿಶ್ವನಾಥ ಅವರುಗಳಿಗೆ ಕೊರೊನಾ ಪಾಸೀಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ತಂಡದ ಎಲ್ಲ ಆಟಗಾರರನ್ನು ಕ್ವಾರಂಟೈನ್ ಮಾಡಿದ ಹಿನ್ನೆಲೆಯಲ್ಲಿ ಈ ವರ್ಷ ಇಂಡಿಯನ್ ಪ್ರೀಮೀಯರ್ ಈ ಋತುವಿನ ಎಲ್ಲ ಲೀಗ್‌ನ ಮುಂದಿನ ಪಂದ್ಯಗಳನ್ನು ಮುಂದೂಡಿದ್ದನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ದೃಢೀಕರಿಸಿದ್ದಾರೆ.
ಇಬ್ಬರು ಕೆಕೆಆರ್ ಆಟಗಾರರು ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಐಪಿಎಲ್‌ನಲ್ಲಿ ಕೋವಿಡ್ -19 ಬಿಕ್ಕಟ್ಟು ತೀವ್ರಗೊಂಡಿದೆ, ಸಿಎಸ್‌ಕೆ ಕ್ಯಾಂಪ್‌ನ ಇಬ್ಬರು ಸಹ ಕೆಲವು ಡಿಡಿಸಿಎ ಮೈದಾನ ಸಿಬ್ಬಂದಿಗಳ ಕೊರನಾ ಪರೀಕ್ಷೆ ನಡೆಸದಿರುವುದೇ ಇದಕ್ಕೆ ಕಾರಣವ ಅಥವಾ ಕೋವಿಡ್ ಯಾವ ಮಾರ್ಗವಾಗಿ ಬಂತು ಎಂಬುದು ದೊಡ್ಡ ಪ್ರಶ್ನೆ. ಮೈದಾನದ ಸಿಬಂದಿ ಮೂಲಕ ಬಂತೇ, ಆಹಾರ ಸರಬರಾಜು ಮಾಡುವರು ತಂದರೇ? ಪ್ರಶ್ನೆಗಳು ಸಹಜ. ಇವರ್ಯಾರೂ ಜೈವಿಕ ಸುರಕ್ಷಾ ವಲಯ ವ್ಯಾಪ್ತಿಗೆ ಬರುವುದಿಲ್ಲ. ಹಾಗೆಯೇ ಇವರಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.
ಆರಂಭದಲ್ಲಿ ವಾಂಖೇಡೆ ಸಿಬಂದಿಗೆ ಕೊರೊನಾ ಬಂದಾಗ ಅವರನ್ನು ಅಲ್ಲಿಯೇ ಉಳಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಆದರೆ ಅಹ್ಮದಾಬಾದ್, ಹೊಸದಿಲ್ಲಿಯಲ್ಲಿ ಇಂಥ ವ್ಯವಸ್ಥೆ ಮಾಡಿಲ್ಲ ಎನ್ನಲಾಗುತ್ತಿದೆ.
ಆದರೆ ಭುಜದ ಒಳಗಾಯದಿಂದಾಗಿ ವರುಣ ಚಕ್ರವಾರ ಅಹಮದಾಬಾದನ ಖಾಸಗಿ ಆಸ್ಪತ್ರೆಗೆ ಸಿಟಿ ಸ್ಕಾö್ಯನ್‌ಗಾಗಿ ತೆರಳಿದ್ದರು ಎಂದು ಹೇಳಲಾಗಿದ್ದು, ಅವರಿಗೆ ಕೊರೊನಾ ಸೋಂಕು ಆಸ್ಪತ್ರೆಯಿಂದ ಬಂದಿರಬಹುದಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಅಲ್ಲದೇ ಕೆಕೆಆರ್ ತಂಡಕ್ಕೆ ಆಯ್ಕೆ ಮಾಡಿಕೊಂಡ ಆಟಗಾರ ಸಂದೀಪ ವಾರಿರ‍್ಸ್ ಈ ವರ್ಷ ಯಾವುದೇ ಪಂದ್ಯವನ್ನು ಸಹ ಆಡಿಲ್ಲ.
ಮುಂದಿನ ಎಲ್ಲ ಪಂದ್ಯಗಳನ್ನು ಮುಂಬೈನ ವಾಖಂಡೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಗುರಿಯನ್ನು ಸಹ ಹೊಂದಲಾಗಿದ್ದು, ಮುಂದಿನ ಪಂದ್ಯಗಳ ವೇಳಾ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.