ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ ಸ್ಥಳದಲ್ಲಿಯೇ ಮಹಿಳೆ ಸಾವು

0
1920

ಕಲಬುರಗಿ, ಏ. 30: ದ್ವೀಚಕ್ರವಾಹನ ಹಾಗೂ ಲಾರಿ ಮದ್ಯ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮಹಿಳೆಯೋರ್ವಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ರಾಮಂದಿರ ಹತ್ತಿರದ ವೃತ್ತದಲ್ಲಿ ಶುಕ್ರವಾರ ಮಧ್ಯಾಹ 4.10ರ ಸುಮಾರಿಗೆ ಸಂಭವಿಸಿದೆ.
ಸಾವೀಗಿಡಾದ ಮಹಿಳೆ ಹೆಸರು ಮಹಿಬೂಬಿ ಶಾಬೋದ್ದೀನ್ (65) ಎಂದು ಹೇಳಲಾಗಿದ್ದು, ದ್ವೀಚಕ್ರ ವಾಹನದ ಮೇಲೆ ಮಗನೊಂದಿಗೆ ಹೊರಾಟಾಗ ಈ ದುರ್ಘಟನೆ ಸಂಭವಿಸಿದೆ.
ಮೃತಪಟ್ಟ ಮಹಿಳೆ ಪರತಾಬಾದ ಹತ್ತಿರದ ಜೋಗೂರ ಗ್ರಾಮದಿಂದ ಕಲಬುರಗಿ ನಗರಕ್ಕೆ ಹೊರಟಿದ್ದರು ಎನ್ನಲಾಗಿದೆ.
ಈ ಘಟನೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮಗನಿಗೆ ಗಂಭೀರಗಾಯವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಶಕೀಲ ಪಾಶಾ ಶಾಬಾಬುದ್ದೀನ್ (22) ಎಂಬಾತನನ್ನು ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆಯ 2 ಎ.ಎಸ್.ಐ. ತಾರಾನಾಥ ಸಿಂಗ್ ಅವರು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಸಂಚಾರಿ ಠಾಣೆ 2 ರಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here