ಕಲಬುರಗಿ, ಏ. 29: ಕಲಬುರಗಿ ತಾಲೂಕ ಪಂಚಾಯತ್ ಸದಸ್ಯ ಪ್ರವೀಣ ಅಡವಿಕರ್ (27) ಅವರು ನಿನ್ನೆ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.
ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಬರುವ ಮಹಾಗಾಂವ ಹತ್ತಿರ ನಾಗೂರ ನಿಂದ ತಾಲೂಕ ಪಂಚಾಯತ್‌ಗೆ ಸದಸ್ಯರಾಗಿ ಆಯ್ಕೆಯಾದ ಇವರಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಚಿಕತ್ಸೆಗಾಗಿ ನೆರೆಯ ಆಂದ್ರ ಪ್ರದೇಶದ ಹೈದ್ರಾಬಾದ್‌ಗೆ ನಿನ್ನೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದರೆಂದು ಅವರು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.