ಬೆಂಗಳೂರು, ಏ. 26: ಅಗತ್ಯವಸ್ತುಗಳನ್ನು ಖರೀದಿಸಲು ಸರಕಾರ ನಾಳೆಯಿಂದ ಬೆಳಿಗ್ಗೆ 6 ರಿಂದ 10ಗಂಟೆಯವರೆಗೆ ಅವಕಾಶ ನೀಡಿದ್ದು, ಕಟ್ಟುನಿಟ್ಟಾಗಿ ಮುಂದಿನ ದಿನದ 20 ಗಂಟೆಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ.
ಅವಶ್ಯಕ ವಸ್ತುಗಳಾದ ದಿನಸಿ ಪದಾರ್ಥಗಳು, ಹಾಲು, ಹಣ್ಣು, ತರಕಾರಿಗಳು ಸೇರಿವೆ.
ಏಪ್ರಿಲ್ 27ರ ರಾತ್ರಿ 9 ಗಂಟೆಯಿAದ 14 ದಿನಗಳ ಕಾಲ ರಾಜ್ಯ ದಾದ್ಯಂತ ಕಟ್ಟುನಿಟ್ಟಿನ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದ್ದು, ರಾಜ್ಯ ಸಾರಿಗೆ ಬಸ್ ಸೇವೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರವನ್ನು ಈ ಲಾಕ್‌ಡೌನ್ ಅವಧಿಯಲ್ಲಿ ನಿಷೇಧಿಸಲಾಗಿದೆ.
ಬಂದ್ ಸಮಯದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳು, ಸೇರಿದಂತೆ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ಸಹ ಬಂದ್ ಆಗಲಿವೆ.
ಆದರೆ ಗೂಡ್ಸ್ ವಾಹನಗಳ ಸಂಚಾರಕ್ಕೆ ರಾಜ್ಯದಲ್ಲಿ ಅಡ್ಡಿಯಿಲ್ಲ ಅಲ್ಲದೇ ಹೊರ ರಾಜ್ಯದ ಸಾರಿಗೆ ಸಂಚಾರಕ್ಕೂ ಸರಕಾರ ಯಾವುದೇ ನಿರ್ಭಂಧ ವಿಧಿಸಿಲ್ಲ.