ಕಲಬುರಗಿ, ಏ. 24: ಕಸ ವಿಲೇವಾರಿ ಮಾಡುವ ವಾಹನದಲ್ಲಿ ಕೋವಿಡ್ ಹೆಲ್ಪಡೆಸ್ಕ್ ಸಿಬ್ಬಂದಿಗಳಿಗೆ ಊಟ ಸರಬರಾಜು ಮಾಡುತ್ತಿಲ್ಲ, ಸರಬರಾಜು ಮಾಡುತ್ತಿರುವ ವಾಹನ ಮಹಾನಗರಪಾಲಿಕೆಯ ಮಟೆರಿಯಲ್ ಹಾಗೂ ಉದ್ಘೋಷಣಾ ವಾಹನವಾಗಿದೆ ಎಂದು ಕಲಬುರಗಿ ಮಹಾನಗರಪಾಲಿಕೆಯ ವಲಯ ಆಯುಕ್ತ ಹಾಗೂ ಆರೋಗ್ಯಾಧಿಕಾರಿ ಡಾ. ವಿನೋದ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ದೂರವಾಣಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಿಸಿಲಿನ ಮಧ್ಯೆ ಹಾಕಿರುವ ತಾತ್ಕಾಲಿಕ ಹೆಲ್ಪಡೆಸ್ಕಗಳನ್ನು ನೆರಳಿರುವ ಕಡೆ ಸ್ಥಳಾಂತರಿಸುವದಾಗಿ ಹೇಳಿದ್ದು, ಅಲ್ಲದೇ ಇನ್ನು ಹೆಚ್ಚಿನ ವಾಹನದ ವ್ಯವಸ್ಥೆ ಕೂಡ ಮಾಡುವದಾಗಿ ಆಯುಕ್ತರು ಹೇಳಿದ್ದಾರೆ.
Home Featured Kalaburagi ಕಸವಿಲೇವಾರಿ ಮಾಡುವ ವಾಹನದಲ್ಲಿ ಊಟ ಸರಬರಾಜು ಮಾಡುತ್ತಿಲ್ಲ ವಲಯ ಆಯುಕ್ತ ಡಾ. ವಿನೋದ ಸ್ಪಷ್ಟೀಕರಣ